ಜಿಲ್ಲೆ

ಗವಿಮಠದ ಜಾತ್ರೆಗೆ ಹೋಳಿಗೆ, ರೊಟ್ಟಿ ರವಾನೆ

ಮಸ್ಕಿ: ಕೊಪ್ಪಳ ಗವಿಮಠದ ಜಾತ್ರೆಗೆ ಪಟ್ಟಣದಿಂದ 8 ಸಾವಿರ ಶೇಂಗಾ ಹೋಳಿಗೆ ಮತ್ತು 5 ಸಾವಿರ ರೊಟ್ಟಿಗಳನ್ನು ಕಳಿಸಿಕೊಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದ ತಾಲೂಕು ಸಂಚಾಲಕ ದೇವರಾಜ ಹಡಪದ ತಿಳಿಸಿದ್ದಾರೆ.

ಸಿಂಧನೂರಿಮ ಭಕ್ತ ಶಿವಕುಮಾರ ಗುಡಿಹಾಳ 2 ಕ್ವಿಂಟಾಲ್ ಶೇಂಗಾ, 2 ಕ್ವಿಂಟಾಲ್ ಬೆಲ್ಲ ಮತ್ತು ಮೈದಾ ಹಿಟ್ಟು ಕಳಿಸಿದ್ದರು. ಮಸ್ಕಿಯ ಮಹಿಳೆಯರು ಚೌಡೇಶ್ವರಿ ಭವನದಲ್ಲಿ ಹೋಳಿಗೆ ತಯಾರಿಸಿದ್ದಾರೆ. ಪಟ್ಟಣದ ಅಮರೇಶ ಬ್ಯಾಳಿ ರೊಟ್ಟಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.