ಜಿಲ್ಲೆ

ಗ್ಯಾಸ್ ಟ್ಯಾಂಕರ್ ಸುರಕ್ಷಿತ ತೆರವು

ಮಂಜುನಾಥ ಅಂಗಡಿ

ಧಾರವಾಡ: ನಗರ ಹೊರವಲಯದ ಬೇಲೂರು ಬಳಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಎಚ್.ಪಿ. ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ನಿರಂತರ ೧೬ ಗಂಟೆ ಕಾರ್ಯಾಚರಣೆ ಮಾಡಿ ಹೊರತೆಗೆಯಲಾಗಿದೆ.
ಬುಧವಾರ ಸಂಜೆ ಬೆಳಗಾವಿ ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಟ್ಯಾಂಕರ್ ವಾಲ್ಮಿ ಎದುರಿನ ಅಂಡರ್‌ಪಾಸ್‌ನಲ್ಲಿ ಸಿಲುಕಿತ್ತು. ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದರು. ಟ್ಯಾಂಕರ್‌ನಿAದ ಅನಿಲ ಸೋರಿಕೆಯಾದರೆ ಅನಾಹುತವಾಗುವ ಸಾಧ್ಯತೆ ಇತ್ತು. ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ಅಗ್ನಿಶಾಮಕ ದಳದೊಂದಿಗೆ ಕಾರ್ಯಾಚರಣೆ ನಡೆಸಿದ್ದರು.
ಅಪಾಯದ ಮುನ್ಸೂಚನೆ ಅರಿತ ಅಽಕಾರಿಗಳು ಬುಧವಾರ ರಾತ್ರಿಯಿಡೀ ವಾಲ್ಮಿ, ಬೇಲೂರು ಕೈಗಾರಿಕಾ ಪ್ರದೇಶ, ಹೈಕೋರ್ಟ್ ಸೇರಿ ಸುತ್ತಲಿನ ಗ್ರಾಮಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದರು. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ಸರದಿ ಸಾಲು ನಿಂತಿತ್ತು.
ಎಚ್.ಪಿ. ಕಂಪನಿಯ ಅಽಕಾರಿಗಳೂ ಸ್ಥಳದಲ್ಲಿದ್ದು, ಟ್ಯಾಂಕರ್‌ನಲ್ಲಿದ್ದ ಅನಿಲವನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರ ಮಾಡಲು ಯೋಜಿಸಿದರು. ಎಸ್‌ಪಿ ಲೋಕೇಶ ಜಗಲಾಸರ್, ಸಿಪಿಐಗಳಾದ ಸಮೀರ ಮುಲ್ಲಾ, ಶಿವಾನಂದ ಕಮತಗಿ ಹಾಗೂ ಅಗ್ನಿಶಾಮಕದ ದಳದ ಅಽಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಸುರಕ್ಷಿತವಾಗಿ ಟ್ಯಾಂಕರ್ ಹೊರಗೆ ಸಾಗಿಸಲು ನಿರ್ದೇಶನ ನೀಡಿದರು.
ನಿರಂತರ ೧೬ ಗಂಟೆ ಕಾರ್ಯಾಚರಣೆ ನಡೆಸಿ ಟ್ಯಾಂಕರ್ ಖಾಲಿ ಮಾಡಿದ ನಂತರ ಆತಂಕ ದೂರಿವಾಯಿತು. ಗುರುವಾರ ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಷ್ಟಿçÃಯ ಹೆದ್ದಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು.