ಜಿಲ್ಲೆ

ಸಿಲಿಂಡರ್ ದರ ಇಳಿಕೆಗೆ ಸಂಸದೆ ಮಂಗಲ ಅಂಗಡಿ ಹರ್ಷ

ಬೆಳಗಾವಿ : ಕೇಂದ್ರ ಸರ್ಕಾರವು  ಗೃಹ ಬಳಕೆಯ ಅಡುಗೆ ಅನಿಲದ ಸಿಲೆಂಡರ್  ದರವನ್ನು  200 ರೂ.ಕಡಿತ ಮಾಡಿರುವ ಸ್ವಾಗತಾರ್ಹ.  ರಕ್ಷಾ ಬಂಧನ ನಿಮಿತ್ತ ಕೈಗೊಂಡಿರುವ ಈ ಕ್ರಮ ದೇಶದ ಎಲ್ಲ ಅಕ್ಕ-ತಂಗಿಯರ ಕುಟುಂಬಕ್ಕೆ ಖಂಡಿತವಾಗಿಯೂ ಆರ್ಥಿಕವಾಗಿ ಸಹಾಯಕರ ವಾಗಲಿದೆ ಎಂದು ಸಂಸದೆ ಮಂಗಲ ಅಂಗಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಸಿಲಿಂಡರ್ ದರ ಕಡಿತದಿಂದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಪಡೆಯುವ ಪ್ರತಿ ಗ್ಯಾಸ್ ಸಿಲೆಂಡರ್‌ಗೆ  ಸಧ್ಯ  400 ರೂಪಾಯಿಯಷ್ಟು  ಸಬ್ಸಿಡಿ ದೊರಕಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಗ್ಯಾಸ ಯೋಜನೆಯನ್ವಯ ಇನ್ನು ಹೆಚ್ಚಿಗೆಯಾಗಿ 75 ಲಕ್ಷ ಹೊಸ ಎಲ್‌ಪಿಜಿ  ಸಂಪರ್ಕವನ್ನು ಬಡ ಜನರ ಕುಟುಂಬಕ್ಕೆ ಉಚಿತವಾಗಿ ಒದಗಿಸಲಿರುವ ಕ್ರಮ ಬಡಜನರಿಗೆ, ತುಂಬಾ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.