ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವದಲ್ಲಿ ಪಾಂಡವಪುರ ಪಟ್ಟಣದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಜನತೆ ಭಾಗವಹಿಸಿ ತಲೆಗೂದಲಿಗೆ ಬಣ್ಣ ಬಳಸಿಕೊಂಡರು. 
ಜಿಲ್ಲೆ

ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಮೆಚ್ಚುಗೆ

ನಾಗೇಶ ಎಸ್

ಪಾಂಡವಪುರ: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಪಟ್ಟಣದ ಹಳೇ ಬಸ್ ನಿಲ್ದಾಣದ ಕಸಬಾ ಸೊಸೈಟಿ ಸಮೀಪದ ಸೂರಿ ಮೆಸ್ ಎದುರಿನಲ್ಲಿ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಉಚಿತ ಅಭಿಯಾನಕ್ಕೆ ಮೂರನೇ ದಿನವಾದ ಮಂಗಳವಾರವೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಹಿಳೆಯರು, ಪುರುಷರು ತಮ್ಮಿಷ್ಟದ ಬಣ್ಣ ಹಾಕಿಸಿಕೊಂಡರು.

ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಡೆಯುತ್ತಿರುವ ಅಭಿಯಾನಕ್ಕೆ ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಜನರು, ಅಭಿಯಾನದಡಿ ತಲೆಗೂದಲಿನ ಅಂದ ಹೆಚ್ಚಿಸಿಕೊಂಡು ಖುಷಿಪಟ್ಟರು. ಪಾಂಡವಪುರದಲ್ಲಿ ಮೂರು ದಿನಗಳವರೆಗೆ ಅಭಿಯಾನ ಆಯೋಜಿಸಲಾಗಿತ್ತು. ಆದರೆ ಜನರಿಗಾಗಿ ಬುಧವಾರವು ಆ.7ರಂದು ಉಚಿತ ಹೇರ್ ಕಲರಿಂಗ್ ಮುಂದುವರಿಯಲಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಯೋಜನ ಪಡೆಯಬಹುದಾಗಿದೆ.