ಗೊಳಸಂಗಿ ಸಮೀಪದ ಮಸೂತಿ ಗ್ರಾಮದ ಪಿಕೆಪಿಎಸ್ ಚುನಾವಣೆಯಲ್ಲಿ ವಿಜೇತರೊಂದಿಗೆ ಅಭಿಮಾನಿಗಳು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಎಸ್.ಎಸ್.ಗರಸಂಗಿ, ಸಂತೋಷ ಚನಗೊಂಡ, ಸಂತೋಷ ಗಣಾಚಾರಿ ಇತರರಿದ್ದರು. 
ಜಿಲ್ಲೆ

ಕೈ ಪಕ್ಷದ ಬಣಕ್ಕೆ ಜಯದ ಮಾಲೆ

ಗೊಳಸಂಗಿ: ತೀವ್ರ ಜಿದ್ದಾಜಿದ್ದಿನೊಂದಿಗೆ ಸಮೀಪದ ಮಸೂತಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ ಭಾನುವಾರ ನಡೆಯಿತು. ಸಂಜೆ ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಬಸವರಾಜ ಅಪ್ಪನಗೌಡ ಪಾಟೀಲ, ಸದಾಶಿವಯ್ಯ ಮಲ್ಲಯ್ಯ ಗಣಾಚಾರಿ, ಸಚೀನ್‌ಕುಮಾರ ಶರಣಗೌಡ ಪಾಟೀಲ, ಬನ್ನೆಪ್ಪ ಈರಪ್ಪ ಕುದರಿ, ಭೀಮರಾವ ಕರಬಸಪ್ಪ ಸಾಲಹಳ್ಳಿ, ಮಹಿಳಾ ಮೀಸಲು ಕ್ಷೇತ್ರದಿಂದ ಶಶಿಕಲಾ ಚಂದ್ರಕಾಂತ ಕಾಗಲ್, ರೇಣುಕಾ ನಾಗಪ್ಪ ಮೋಕಾಶಿ, ಹಿಂದುಳಿದ ಅ ವರ್ಗದಿಂದ ಭೀಮರಾಯ ಕಾಶಿಪತಿ ಪತ್ತಾರ, ಹಿಂದುಳಿದ ಬ ವರ್ಗದಿಂದ ಬಸವರಾಜ ಮಲ್ಲಪ್ಪ ಸಾಲೊಳ್ಳಿ, ಪರಿಶಿಷ್ಟ ಜಾತಿಯಿಂದ ಶರಣಪ್ಪ ಮಾರುತಿ ಚಲವಾದಿ, ಪರಿಶಿಷ್ಟ ಪಂಗಡದಿಂದ ಚಂದಪ್ಪ ಹನಮಂತಪ್ಪ ತಳವಾರ, ಬಿನ್ ಸಾಲಗಾರ ಕ್ಷೇತ್ರದಿಂದ ಮಲ್ಲಿಕಾರ್ಜುನ ಈರಪ್ಪ ವಾಲಿಕಾರ ಚುನಾಯಿತರಾಗಿದ್ದಾರೆ.

ವಿಜಯೋತ್ಸವ: ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಬೆಂಬಲಿತ ವಿಜೇತರ ಅಭಿಮಾನಿಗಳು, ಕಾರ್ಯಕರ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನ್ಯಾಯವಾದಿ ಎಸ್.ಎಸ್.ಗರಸಂಗಿ, ಪ್ರಮುಖರಾದ ಸಂತೋಷ ಚನಗೊಂಡ, ಸಂತೋಷ ಗಣಾಚಾರಿ, ಮುತ್ತು ನಾಗರಾಳ, ಸಂಗು ಚಿಮ್ಮಲಗಿ, ನಂದು ಬರಗಿ, ಮುದಕಣ್ಣ ರುದ್ರಗೋಳ, ಈರಪ್ಪ ದಳವಾಯಿ, ರುದ್ರಗೌಡ ಗಂಗಲ್ಲ, ರಾಜು ಬಂಡಿವಡ್ಡರ ಇತರರಿದ್ದರು.