ನರಗುಂದ: ನರಗುಂದ ಸಂಸ್ಥಾನದ ವೀರ ಅರಸ ಬಾಬಾಸಾಹೇಬ ಭಾವೆ ಅವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿಗಳು, ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಗೌರವ ನಮನ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಮಾತನಾಡಿ, ನಮ್ಮ ನಾಡನ್ನು ಬ್ರಿಟಿಷರ ಸಂಕೋಲೆಯಿಂದ ಮುಕ್ತಗೊಳಿಸಲು ಹೋರಾಟ ಮಾಡಿರುವ ಬಾಬಾಸಾಹೇಬರ ಶೌರ್ಯ, ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಹೆಮ್ಮೆಯ ಪ್ರತೀಕವಾಗಿದೆ ಎಂದರು.
ಬಾಬಾಸಾಹೇಬರ ಬಲಿದಾನ ದಿನದ ಅಂಗವಾಗಿ ಪುರಸಭೆ ಆವರಣದಲ್ಲಿರುವ ಪುತ್ಥಳಿ ಸ್ವಚ್ಛಗೊಳಿಸಲಾಯಿತು. ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಪ್ರಶಾಂತ ಜೋಶಿ, ಶ್ರೀಕಾಂತ ನರಗುಂದ, ಪವಾಡೆಪ್ಪ ವಡ್ಡಿಗೇರಿ, ಆರ್.ಪಿ. ಮಳೇಕರ, ಶಿವಾಜಿ ಡುರೇನವರ, ಜೆ.ಪಿ.ಪಾಟೀಲ, ಸಿದ್ದಪ್ಪ ಆಯಟ್ಟಿ, ವಿಠ್ಠಲ ಹಡಗಲಿ, ನಾಗೇಶ ಅಪ್ರೋಜಿ, ಮೀನಾಜಿ ಜೋರಾಪೂರ, ಪ್ರಶಾಂತ ಪಲ್ಲೇದ, ಮಹಾಬಲೇಶ ಕುಂದನಗಾರ, ಎಸ್.ವೈ.ಪಾಟೀಲ, ವಿಶ್ವನಾಥ ದೇಶಪಾಂಡೆ, ಶಿವಮೂರ್ತಿ ಜಲ್ಲಿ, ವಿನಾಯಕ ಬೆಳಮಕರ, ಶಂಕರ ಹುಬ್ಬಳ್ಳಿ, ಶ್ರೀನಿವಾಸ ಗುಡಿಸಾಗರ, ಮಂಜುನಾಥ ಶಿಂಪಿ, ಇತರರು ಉಪಸ್ಥಿತರಿದ್ದರು.