ಜಿಲ್ಲೆ

ಉದ್ಯಾನ ಸಮಸ್ಯೆ ಬಗೆಹರಿಸಲು ಶಾಸಕ ಟೆಂಗಿನಕಾಯಿ ಸೂಚನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಉದಯನಗರದ ಉದ್ಯಾನದ ಜಾಗವನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲಿಸಿರುವುದನ್ನು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಮಹೇಶ ಟೆಂಗಿನಕಾಯಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.

ಉದಯನಗರ ಹಿತಾಭಿವೃದ್ಧಿ ನಿವಾಸಿಗಳ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ರ್ಚಚಿಸಿ, ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ನಿರ್ದೇಶನ ನೀಡಿದರು.

ವಲಯ ಸಹಾಯಕ ಆಯುಕ್ತ ಬೆವೂರ, ಉದಯನಗರ ಹಿತಾಭಿವೃದ್ದಿ ಸಂಘದ ಸದಸ್ಯರಾದ ರಾಜು ಮರಾಠೆ, ಅಶೋಕ ಅಮರಾವತಿ, ಪ್ರವೀಣ ಹುರಳಿ, ಸುಧಾಕರ ಶಿಲಭದ್ರ, ಸಾಯಿಕುಮಾರ ಸವದತ್ತಿ ಹಾಗೂ ಇತರರು ಉಪಸ್ಥಿತರಿದ್ದರು.