ಜಿಲ್ಲೆ

ಡಿಆರ್‌ಡಿಒ ಗಾರ್ಡನ್ ಕ್ಲೀನಿಂಗ್ ಕಾರ್ಮಿಕರ ಪ್ರತಿಭಟನೆ

Chitradurga

ಚಿತ್ರದುರ್ಗ: ಚಳ್ಳಕೆರೆ ತಾಲೂಕು ವರವುಕಾವಲು ಡಿಆರ್‌ಡಿಒದಲ್ಲಿ ಗಾರ್ಡ್‌ನ್ ಕ್ಲೀನಿಂಗ್ ಕೆಲಸದಲ್ಲಿದ್ದ ಕಾರ‌್ಯನಿರ್ವಹಿಸುತ್ತಿರುವ ಕ್ಲಾಸಿಕ್ ಫೆಸಿಲಿಟಿಸ್ ಸರ್ವಿಸ್ ಸಂಸ್ಥೆಯ ನಮ್ಮನ್ನು ಏಕಾಏಕಿ ವಜಾಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ನೊಂದ ಕಾರ್ಮಿಕ ರು ಡಿಸಿ ಕಚೇರಿ ಬಳಿ ಪ್ರತಿಭಟಿಸಿದರು.

ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೇಲ್ವಿಚಾರಕ ಹಾಗೂ 15 ಕಾರ್ಮಿಕರನ್ನು ಕೂಲಿಕಾರರಿಗೆ ಯಾವುದೇ ಕಾರಣ ನೀಡದೆ ಕೆ ಲಸದಿಂದ ವಜಾಗೊಳಿಸಿ ಹೊಸಬರನ್ನು ನೇಮಿಸಿಕೊಳ್ಳಲಾಗಿದೆ. ಇದರಿಂದಾಗಿ ನಮ್ಮ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ವಿಚಾರಿಸಿದರೆ ಸಂಬಂಧಿಸಿದ ಅಧಿಕಾರಿಗಳು ಉಡಾಫೆ ನೀಡುತ್ತಿದ್ದಾರೆಂದು,ಕರುನಾಡು ಜನಜಾಗೃತಿ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ‌್ಯದರ್ಶಿ ಜಿ.ಆರ್.ಪ್ರಭಾಕರ್

ನೊಂದ ಕಾರ್ಮಿಕರಾದ ನಿರಂಜನ್,ತಿಪ್ಪೇಸ್ವಾ ಮಿ, ಆದಿಮೂರ್ತಿ,ತುಡುಮಜ್ಜ,ಇ.ತಿಪ್ಪೇಸ್ವಾಮಿ,ಪಿ.ಮಂಜುನಾಥ,ಗುರುಮೂರ್ತಿ,ಹೇಮಣ್ಣ, ರವಿಚಂದ್ರ, ರಾಧಮ್ಮ, ನೀಲಮ್ಮ,ಶಿಲ್ಪಮ್ಮ, ಸರೋಜಮ್ಮ,ರಾಹುಲ್,ಶಿವರಾಜ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು. ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿ ಸಿ ಡಿಸಿಗೆ ಮನವಿ ಸಲ್ಲಿಸಿದರು.