ಜಿಲ್ಲೆ

ಬಡ್ತನಬೈಲು ರಾಜ್ಯ ಹೆದ್ದಾರಿ ಬದಿ ತ್ಯಾಜ್ಯ ರಾಶಿ

ಹೆಬ್ರಿ: ಕುಚ್ಚೂರು ಗ್ರಾಪಂ ವ್ಯಾಪ್ತಿಯ ಬಡ್ತನಬೈಲು ಎಂಬಲ್ಲಿ ರಾಜ್ಯ ರಸ್ತೆ ಬದಿಯಲ್ಲಿ ತ್ಯಾಜ್ಯದ ಪ್ಲಾಸ್ಟಿಕ್ ಚೀಲ ಎಸೆದು ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಸ್ತೆ ಬದಿಯಲ್ಲಿ ನಿರಂತರವಾಗಿ ಕಸ ಎಸೆಯುವುದು ಸಾಮಾನ್ಯವಾಗಿದ್ದು, ಮಠದಬೆಟ್ಟು ಸೇತುವೆ ಬಳಿಯಿಂದ ಹಾಲಿಕೋಡ್ಲು ಬಸ್ ತಂಗುದಾಣದ ತನಕ ರಸ್ತೆ ಬದಿಯಲ್ಲಿ ಕಸದ ರಾಶಿ ಇರುತ್ತದೆ. ಸಾರ್ವಜನಿಕರು ಮನೆಯ, ಕಾರ್ಯಕ್ರಮದ ಕಸ, ಮದ್ಯಬಾಟಲಿಗಳನ್ನು ಎಸೆಯುತ್ತಾರೆ. ಮಂಗಗಳು, ನಾಯಿಗಳು ಕಸವನ್ನೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಿದ್ದು ಪರಿಸರದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ.

ಸ್ಥಳೀಯ ಆಡಳಿತ ಮನೆ ಮನೆಗೆ ಬಂದು ಕಸ ಸಂಗ್ರಹ ವ್ಯವಸ್ಥೆ ಮಾಡಿದ್ದರೂ ರಸ್ತೆ ಬದಿ ಕಸ ಎಸೆಯುವಂತಹ ಅನಾಗರಿಕ ಪ್ರವೃತ್ತಿ ಮುಂದುವರಿದಿದೆ.

ಸ್ಥಳೀಯವಾಗಿ ಪಂಚಾಯಿತಿ ವತಿಯಿಂದ ಕಸ ಸಂಗ್ರಹ ನಡೆಯುತ್ತಿದೆ. ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆದು ಹೋಗುತ್ತಾರೆ. ಸಂಬಂಧಪಟ್ಟವರು ಅಂಥವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಕುಚ್ಚೂರು ಶ್ರೀಕಾಂತ್ ಪೂಜಾರಿ ಸಾಮಾಜಿಕ ಕಾರ್ಯಕರ್ತ