ಜಿಲ್ಲೆ

ಅಂಚಟಗೇರಿಯಲ್ಲಿ ತ್ಯಾಜ್ಯ ವಿಂಗಡಣೆ ಪ್ರಾತ್ಯಕ್ಷಿಕೆ

Dharwada - Basavaraj Idli

ಹುಬ್ಬಳ್ಳಿ: ಹಸಿರು ದಳ ಹಾಗೂ ಅಂಚಟಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಅಂಚಟಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಸ ಪ್ರಸಂಗ; ತ್ಯಾಜ್ಯ ವಿಂಗಡಣೆ ಪ್ರಾತ್ಯಕ್ಷಿಕೆ ಮತ್ತು ಹೇರ್ ಬ್ಯಾಂಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರಾತ್ಯಕ್ಷಿಕೆಯ ಮೂಲಕ ಹಸಿ ಕಸ, ಒಣ ಕಸದ ಸಮರ್ಪಕ ವಿಂಗಡಣೆ ಮತ್ತು ವಿಲೇವಾರಿಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.

ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ನಿತ್ಯ ತಲೆ ಬಾಚುವಾಗ ಹಣಿಗೆಗಂಟುವ ಕೂದಲು ಗುಚ್ಛವನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಲು ಹೇರ್ ಬ್ಯಾಂಕ್ ವಿತರಿಸಲಾಯಿತು.

ಅಂಚಟಗೇರಿ ಗ್ರಾಮ ಪಂಚಾಯತಿಯ ಎನ್.ಬಿ. ಫಿರೋಜಿ, ಕಾರ್ಯದರ್ಶಿ ಶಿವಾನಂದ ಅರ್ಜಿ, ಹಸಿರು ದಳದ ವ್ಯವಸ್ಥಾಪಕ ಮಂಜುನಾಥ ಬಾರಕೇರ, ಶಿಕ್ಷಕಿ ಶ್ರೀದೇವಿ ಬೇರಗುಡ್ಡ, ಶಾಲಾ ಸಿಬ್ಬಂದಿ ವಿದ್ಯಾ ಪೂಜಾರ, ಚಂದ್ರಪ್ಪ ಹಿತ್ಲಳ್ಳಿ, ಹಸಿರು ದಳದ ರಮೇಶ ಬೇವೂರ, ನಿಂಗನಗೌಡ ಸತ್ತಿಗೌಡ್ರ, ದೀಪ್ತಿ ಭಜಂತ್ರಿ ಇತರರು ಉಪಸ್ಥಿತರಿದ್ದರು.