ಗಂಗೊಳ್ಳಿ ಗ್ರಾಮದ ಮಡಿ ಲೈಟ್‌ಹೌಸ್ ಹತ್ತಿರದ ಕಡಲ ತೀರದಲ್ಲಿ ಕಂಡು ಬಂದ ಕಸದ ರಾಶಿ 
ಜಿಲ್ಲೆ

ಕಡಲತೀರದಲ್ಲಿ ಹೆಚ್ಚುತ್ತಿದೆ ಕಸದ ರಾಶಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಗ್ರಾಮದ ಮಡಿ ಲೈಟ್‌ಹೌಸ್ ಹತ್ತಿರದ ಕಡಲ ತೀರದಲ್ಲಿ ಕಸದ ರಾಶಿ ಭಾನುವಾರ ಕಂಡುಬಂದಿದೆ. ಒಂದೆಡೆ ಸಮುದ್ರ ದಂಡೆಗಳನ್ನು ಸ್ವಚ್ಛಗೊಳಿಸುವ ಸರಣಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇನ್ನೊಂದೆಡೆ ಕಸದ ರಾಶಿ ಸತತ ತುಂಬುತ್ತಲೇ ಇದೆ. ಇದರಿಂದ ಸಮುದ್ರ ಮಲೀನಗೊಳ್ಳುವ ಆತಂಕ ಎದುರಾಗಿದ್ದು, ಮತ್ಸೃಸಂಪತ್ತಿಗೂ ಹಾನಿಯಾಗುವ ಸಂಭವವಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.