ಜಿಲ್ಲೆ

ಚಿಕ್ಕಪೇಟೆಯಲ್ಲಿ ರಾತ್ರಿ ವೇಳೆಯೂ ಕಸ ಸಂಗ್ರಹಕ್ಕೆ ಸೂಚನೆ

lakshmihegde

ಬೆಂಗಳೂರು: ಚಿಕ್ಕಪೇಟೆ ವಾರ್ಡ್ 109ರ ವ್ಯಾಪ್ತಿಯಲ್ಲಿ ವಸತಿ ಮತ್ತು ವಾಣಿಜ್ಯ ಪ್ರದೇಶಗಳು ಹೆಚ್ಚಾಗಿವೆ. ಇಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ, ರಾತ್ರಿ ವೇಳೆ ಕಸ ಸಂಗ್ರಹಸಿ ಸ್ವಚ್ಛತೆ ಕಾಪಾಡಬೇಕು ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳಿಗೆ ಮೇಯರ್ ಎಂ. ಗೌತಮ್​ಕುಮಾರ್ ಸೂಚಿಸಿದ್ದಾರೆ.

ಚಿಕ್ಕಪೇಟೆ ವಾರ್ಡ್-109ರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಸಂಚರಿಸುವ ಮೂಲಕ ಮೇಯರ್ ಪರಿಶೀಲನೆ ನಡೆಸಿದರು.

ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯ ಅಭಿನಯ್ ಚಿತ್ರಮಂದಿರ, ಅವೆನ್ಯೂ ರಸ್ತೆ, ಕಬ್ಬನ್​ಪೇಟೆ, ನಗರ್ತಪೇಟೆ, ರಾಮನಪೇಟೆ, ಸುಲ್ತಾನ್​ಪೇಟೆ ರಸ್ತೆಗಳನ್ನು ಅಧಿಕಾರಿಗಳ ಜತೆ ಪರಿಶೀಲಿಸಿದರು. ಚಿಕ್ಕಪೇಟೆ ವಾರ್ಡ್​ನಲ್ಲಿ ವಸತಿ ಪ್ರದೇಶಗಳ ಜತೆಗೆ ವಾಣಿಜ್ಯ ಪ್ರದೇಶಗಳು ಮತ್ತು ಮಳಿಗೆಗಳಿಂದ ಪ್ರತಿನಿತ್ಯ ಹೆಚ್ಚಿನ ಪ್ರಮಾಣದ ಕಸ ಉತ್ಪತ್ತಿಯಾಗುತ್ತಿದೆ. ಹಾಗಾಗಿ ಪ್ರತಿನಿತ್ಯ ಹೆಚ್ಚುವರಿಯಾಗಿ ಕಾಂಪ್ಯಾಕ್ಟರ್ ಹಾಗೂ ಆಟೋಟಿಪ್ಪರ್​ಗಳನ್ನು ಬಳಸಿ 2 ಪಾಳಿಯಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಆದೇಶಿಸಿದರು.

ಜಿಯೋ ಮ್ಯಾಪಿಂಗ್ ತಕ್ಕಂತೆ ಕಸ ಸಂಗ್ರಹಿಸಿ: ಜಿಯೋ ಮ್ಯಾಪಿಂಗ್​ನಂತೆ ರಾತ್ರಿ ವೇಳೆ 8ರಿಂದ 10 ಗಂಟೆವರೆಗೆ ಕಾಂಪ್ಯಾಕ್ಟರ್ ಬಳಸಿ ತ್ಯಾಜ್ಯ ಸಂಗ್ರಹಿಸಬೇಕು. ಕಸ ಸುರಿಯುವ ಸ್ಥಳಗಳನ್ನು ಕೂಡಲೇ ಸ್ವಚ್ಛಗೊಳಿಸದಿದ್ದರೆ ಅಲ್ಲಿ ಬ್ಲಾ್ಯಕ್​ಸ್ಪಾಟ್ ನಿರ್ವಣವಾಗುತ್ತದೆ. ಜತೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗುತ್ತದೆ. ಅಧಿಕಾರಿಗಳು ಇದನ್ನು ನಿರ್ಲಕ್ಷಿಸಬಾರದು. ಇಲ್ಲಿ ರಸ್ತೆ ದುರಸ್ತಿ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿ ಮಾಡುವ ಅಗತ್ಯವಿದೆ. ಹಾಗಾಗಿ ಶೀಘ್ರ ಅಭಿವೃದ್ಧಿ ಕಾಮಗಾರಿಗಳ ವೆಚ್ಚದ ಅಂದಾಜು ಪಟ್ಟಿ ತಯಾರಿಸುವಂತೆ ವಲಯ ಜಂಟಿ ಆಯುಕ್ತರಿಗೆ ಮೇಯರ್ ಸೂಚಿಸಿದರು. ಅವೆನ್ಯೂ ರಸ್ತೆ ಪಾದಚಾರಿ ಮಾರ್ಗ ಹಾಳಾಗಿದ್ದು, ದುರಸ್ತಿಗೆ ಕ್ರಮ ವಹಿಸಬೇಕು ಎಂದರು.

ಪಾಲಿಕೆ ಸದಸ್ಯೆ ಲೀಲಾ ಶಿವಕುಮಾರ್, ವಲಯ ಜಂಟಿ ಆಯುಕ್ತ ಚಿದಾನಂದ್ ಇತರೆ ಅಧಿಕಾರಿಗಳು ಜತೆಯಲ್ಲಿದ್ದರು.

ಆರೋಗ್ಯಾಧಿಕಾರಿಗೆ ನೋಟಿಸ್: ನಗರ್ತಪೇಟೆ ರಸ್ತೆ ಬದಿಯಲ್ಲಿ ಸುರಿಯಲಾಗಿದ್ದ ಕಟ್ಟಡ ತ್ಯಾಜ್ಯ ತೆರವುಗೊಳಿಸಬೇಕು. ಸುಲ್ತಾನ್​ಪೇಟೆಯಲ್ಲಿ ಸ್ಯಾನಿಟರಿ ನೀರು ರಸ್ತೆಯಲ್ಲಿಯೇ ನಿಂತಿದ್ದು ಸಂಬಂಧಪಟ್ಟವರ ಜತೆ ರ್ಚಚಿಸಿ ಸರಿಪಡಿಸಬೇಕು. ಸ್ವಚ್ಛತೆ ಮತ್ತು ಅಭಿವೃದ್ಧಿ ಕುರಿತು ತಪಾಸಣೆ ನಡೆಸುವಾಗ ಹಾಜರಾಗದ ಹಿರಿಯ ಆರೋಗ್ಯಾಧಿಕಾರಿಗೆ ಶೋಕಾಸ್ ನೋಟೀಸ್ ನೀಡುವಂತೆ ಜಂಟಿ ಆಯುಕ್ತರಿಗೆ ಗೌತಮ್ುಮಾರ್ ಸೂಚಿಸಿದರು.

ಮತ್ತೆ ಪರಿಶೀಲಿಸುವೆ

ಚಿಕ್ಕಪೇಟೆ ವಾರ್ಡ್​ನಲ್ಲಿ ಹಲವು ರಸ್ತೆಗಳಲ್ಲಿ ಪರಿಶೀಲನೆ ಮಾಡಿದ್ದೇನೆ. ಸಾಕಷ್ಟು ಸಮಸ್ಯೆಗಳು ಇವೆ. ಅವನ್ನು ಸರಿಪಡಿಸಲು ಪಾಲಿಕೆ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ. ಆಯುಕ್ತರು, ವಲಯ ವಿಶೇಷ ಆಯುಕ್ತರು ಹಾಗೂ ಇತರೆ ಅಧಿಕಾರಿಗಳ ಜತೆ ಸದ್ಯದಲ್ಲೇ ಮತ್ತೊಮ್ಮೆ ವಾರ್ಡ್ ಪರಿಶೀಲನೆ ಮಾಡುತ್ತೇನೆ. ನಂತರ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಗೌತಮ್ುಮಾರ್ ತಿಳಿಸಿದರು.

ಚಿಕ್ಕಪೇಟೆಯಲ್ಲಿ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಹಾಗಾಗಿ ಇಲ್ಲಿ ರಾತ್ರಿ ವೇಳೆ ಕಸ ಸಂಗ್ರಹಿಸಬೇಕು. ಚಿಕ್ಕಪೇಟೆಯ ಜನ ಒಳ್ಳೆಯವರು. ಹಾಗಾಗಿ ಇದುವರೆಗೂ ಸುಮ್ಮನಿದ್ದಾರೆ. ನಮ್ಮ ವಾರ್ಡ್​ನಲ್ಲಿ ಆಗಿದ್ದರೆ ನಿಮಗೆ ಸ್ಥಳೀಯರು ಚಪ್ಪಲಿ ಹಾರ ಹಾಕುತ್ತಿದ್ದರು. | ಗೌತಮ್​ ಕುಮಾರ್  ಮೇಯರ್​