ಜಿಲ್ಲೆ

9 ತಿಂಗಳಲ್ಲಿ ಕರಗಲಿದೆ ಕಸದ ಬೆಟ್ಟ

ಸುನಿಲ್ ಪೊನ್ನೇಟಿ

ಮಡಿಕೇರಿ:

ಎಲ್ಲವೂ ಅಂದುಕೊAಡAತೆ ಆದರೆ ಮಡಿಕೇರಿ ಪ್ರವೇಶಿಸುತ್ತಿದ್ದಂತೆಯೇ ದೂರದಿಂದ ಸ್ವಾಗತಿಸುವ ಇಲ್ಲಿಯ ಸ್ಟೋನ್ ಹಿಲ್ ಕಸದ ಬೆಟ್ಟ ಇನ್ನು 9 ತಿಂಗಳಲ್ಲಿ ಸಂಪೂರ್ಣ ಕರಗಲಿದೆ. ಈ ಸಂಬAಧ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇಲ್ಲಿಯ 'ಪಾರಂಪರಿಕ ಕಸ' ತೆರವು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಟ್ಟು 5.44 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಕುಶಾಲನಗರ ಮತ್ತು ವಿರಾಜಪೇಟೆಯಲ್ಲೂ 'ಪಾರಂಪರಿಕ ಕಸ' ವಿಲೇವಾರಿ ಆಗಲಿದ್ದು, 'ಸ್ವಚ್ಛ ಕೊಡಗು' ಪರಿಕಲ್ಪನೆ ಮತ್ತೆ ಗರಿಗೆದರಿದೆ.

ಅದ್ಭುತ ಪ್ರಾಕÊತಿಕ ಸೌಂದರ್ಯದ ಮಡಿಕೇರಿ ಸುಬ್ರಹ್ಮಣ್ಯನಗರದ ಸ್ಟೋನ್‌ಹಿಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ನಗರದ ತ್ಯಾಜ್ಯವನ್ನೆಲ್ಲಾ ತೆಗೆದುಕೊಂಡು ಹೋಗಿ ಸುರಿಯಲಾಗುತ್ತಿದ್ದು, ಕಸದ ದೊಡ್ಡ ಬೆಟ್ಟವೇ ಇಲ್ಲಿ ಸÊಷ್ಟಿಯಾಗಿದೆ. ದಿನಕ್ಕೆ ಸುಮಾರು 30ನ ಟನ್‌ಗಳಷ್ಟು ಕಸ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಗ್ರಹವಾಗುವ ಅಂದಾಜಿದ್ದು, ವಾರಾಂತ್ಯ ಮತ್ತು ರಜಾದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು ಇರುತ್ತದೆ. ಹೀಗೆ ಸಂಗ್ರಹವಾಗುವ ತ್ಯಾಜ್ಯ ಕೊನೆಗೆ ಸೇರುವುದು ಸ್ಟೋನ್ ಹಿಲ್‌ಗೆ. ಹೀಗೆ ಇಲ್ಲಿ ಕಸ ಸಂಗ್ರಹವಾಗಿ ಸಂದರ ಮಡಿಕೇರಿಯ ದೃಷ್ಟಿಬೊಟ್ಟುವಿನಂತೆ ಕಂಡುಬರುತ್ತಿತ್ತು.

ಸ್ಟೋನ್ ಹಿಲ್ ಮೇಲೆ ಸೃಷ್ಟಿಯಾಗಿರುವ ಕಸದ ಬೆಟ್ಟದಿಂದ ಇಲ್ಲಿಯ ಸೂಕ್ಷö್ಮ ಪರಿಸರ ಸಂಪೂರ್ಣ ಹಾಳಾಗಿದ್ದು ಮಾತ್ರವಲ್ಲದೆ ಕೆಳಭಾಗದ ಸುಬ್ರಹ್ಮಣ್ಯ ನಗರ, ರೈಫಲ್ ರೇಂಜ್, ವಿದ್ಯಾನಗರ, ಮುಳಿಯ ಬಡಾವಣೆ ನಿವಾಸಿಗಳು ಪ್ರತಿದಿನ ಭಯದಿಂದಲೇ ಬದುಕುವ ಸ್ಥಿತಿ ನಿರ್ಮಾಣ ಆಗಿದೆ. ಮಳೆಗಾಲದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಬಗ್ಗೆ ಆತಂಕಿತರಾಗಿ ದಿನಕಳೆಯುವ ಇಲ್ಲಿಯ ನಿವಾಸಿಗಳಿಗೆ, ನೊಣ, ಸೊಳ್ಳೆ, ಬೀದಿ ನಾಯಿ, ಕಾಗೆಗಳ ಹಾವಳಿ ಎದುರಿಸುವುದೇ ದೊಡ್ಡ ಸವಾಲಾಗಿದೆ. ಹಾಗಾಗಿ ತಾವು ಅಸಹನೀಯ ಪರಿಸ್ಥಿತಿಯಲ್ಲಿ ವಾಸ ಮಾಡುತ್ತಿರುವುದರಿಂದ ಮೊದಲು ಇಲ್ಲಿಂದ ತ್ಯಾಜ್ಯ ಖಾಲಿ ಮಾಡಿಸಿ ಎನ್ನುವ ಒತ್ತಾಯ ಸ್ಥಳೀಯರದ್ದಾಗಿತ್ತು. ಈ ಸಂಬAಧ ನ್ಯಾಯಾಲಯದ ಮೊರೆಯನ್ನೂ ಹೋಗಿದ್ದರು.

ಇದೀಗ ಸ್ಥಳೀಯರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ಸ್ಟೋನ್ ಹಿಲ್‌ನಲ್ಲಿ ಸಂಗ್ರಹವಾಗಿರುವ 'ಪಾರಂಪರಿಕ ಕಸ' ತೆರವು ಮಾಡುವ ಕಾರ್ಯಕ್ಕೆ ಶುಕ್ರವಾರ ಸಂಜೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೊಡಗಿನ ಪರಿಸರದ ಬಗ್ಗೆ ತೀವ್ರ ಕಾಳಜಿ ಹೊಂದಿರುವ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈ ಕಾರ್ಯಕ್ಕೆ ಹಸಿರು ನಿಸಾನೆ ತೋರಿಸಿದ್ದಾರೆ. ಒಟ್ಟು 5.44 ಕೋಟಿ ರೂ. ಮೊತ್ತದ ಈ ಯೋಜನೆಯ ಗುತ್ತಿಗೆಯನ್ನು ಪುಣೆಯ ಸಂಸ್ಥೆಯೊAದು ಪಡೆದುಕೊಂಡಿದ್ದು, 9 ತಿಂಗಳ ಒಳಗೆ ಕಾಮಗಾರಿ ಮುಗಿಸುವ ಗುರಿ ನೀಡಲಾಗಿದೆ.

ದೇಶದ ಅತ್ಯಂತ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿದೆ. ಆದರೆ ಸ್ಟೋನ್ ಹಿಲ್ ತ್ಯಾಜ್ಯ ಸಂಗ್ರಹ ಈ ಹೆಗ್ಗಳಿಕೆಗೆ ಅಪವಾದ ಎಂಬAತಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಇಲ್ಲಿಂದ ತೆರವು ಮಾಡುವುದು ಗುತ್ತಿಗೆದಾರರಿಗೆ ದೊಡ್ಡ ಸವಾಲಾಗಿದೆ. ಹಾಗಾಗಿ ತೆರವು ಕಾರ್ಯ ನಡೆಯುವ ಸಂದರ್ಭ ಸ್ಥಳೀಯರ ಸಹಕಾರವೂ ಅಗತ್ಯ ಎನ್ನುತ್ತಾರೆ ಶಾಸಕ ಡಾ. ಮಂತರ್ ಗೌಡ. ಕಸ ವಿಲೇವಾರಿಗೆ ನೂತನವಾಗಿ ಗುರುತಿಸಲಾಗಿರುವ 10 ಎಕರೆ ಜಾಗದಲ್ಲೂ ಇನ್ನು ಮುಂದೆ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುವ ಮೂಲಕ ಭವಿಷ್ಯದ ಬಗ್ಗೆ ಕಾಳಜಿ ತೋರಿಸಬೇಕು ಎನ್ನುವುದು ಅವರ ಅಭಿಪ್ರಾಯ

ಜಿಲ್ಲೆಯಲ್ಲಿ 'ಪಾರಂಪರಿಕ ತ್ಯಾಜ್ಯ' ತೆರವು ಮಾಡುವ ಈ ಯೋಜನೆ ಒಟ್ಟು 12.39 ಕೋಟಿ ರೂ. ಮೊತ್ತದಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಸ್ಟೊನ್ ಹಿಲ್‌ನಲ್ಲಿ ಸಂಗ್ರಹವಾಗಿರುವ ಅಂದಾಜು 76,636 ಮೆಟ್ರಿಕ್ ಟನ್ ಕಸ ವಿಲೇವಾರಿಗೆ 5.44 ಕೋಟಿ ರೂ. ವೆಚ್ಚವಾಗಲಿದೆ. ಕುಶಾಲನಗರ ಪುರಸಭೆಗೆ ಸಂಬAಧಿಸಿದ ತ್ಯಾಜ್ಯ ಕಣಿವೆ ಸಮೀಪದ ಭುವನಗಿರಿಯಲ್ಲಿ ಸುಮಾರು 41,014 ಮೆಟ್ರಿಕ್ ಟನ್ ಸಂಗ್ರಹವಾಗಿದ್ದು, ಇದರ ವಿಲೇವಾರಿಗೆ 2.91 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ವಿರಾಜಪೇಟೆ ಪುರಸಭೆಗೆ ಸಂಬAಧಿಸಿದ ತ್ಯಾಜ್ಯ ಸುಮಾರು 34,804 ಮೆಟ್ರಿಕ್ ಟನ್‌ಗಳಷ್ಟು ಆರ್ಜಿ ಗ್ರಾಮದಲ್ಲಿ ಸಂಗ್ರಹವಾಗಿದ್ದು, ಈ ತ್ಯಾಜ್ಯ ವಿಲೇವಾರಿಗೆ 2.47 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಸ್ಥಳೀಯ ಆಡಳಿತಗಳ ಮುಖಾಂತರ ಸಂಗ್ರಹವಾಗುವ ತ್ಯಾಜ್ಯ 'ಪಾರಂಪರಿಕ ತ್ಯಾಜ್ಯ' ತ್ಯಾಜ್ಯ ಆಗಿ ಪರಿವರ್ತನೆ ಆಗದಂತೆ ತಡೆಯುವಲ್ಲಿ ಜನಸಾಮಾನ್ಯರೂ ಕಾಳಜಿ ತೋರಿಸಬೇಕು ಎನ್ನುತ್ತಾರೆ ತಜ್ಞರು. ಮನೆ, ಹೊಟೇಲ್, ಉದ್ದಿಮೆಗಳಲ್ಲಿ ಸಂಗ್ರಹವಾಗುವ ಕಸ ಸ್ಥಳೀಯ ಆಡಳಿತದ ಕಸ ಸಂಗ್ರಹದ ವಾಹನಕ್ಕೆ ಕೊಡುವುದಕ್ಕೂ ಮೊದಲು ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡಿದರೆ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಕೊಡುವುದರಿಂದ ಪೌರ ಕಾರ್ಮಿಕರ ಕೆಲಸವೂ ಸುಲಭ ಆಗಲಿದೆ. ಹಸಿ ಕಸ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತನೆ ಆದರೆ, ಒಣಕಸ ಮರುಬಳಕೆಗೆ ಕಳುಹಿಸಲಾಗುತ್ತದೆ. ಈ ಕೆಲಸ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಈಗ ಯಶಸ್ವಿಯಾಗಿ ನಡೆಯುತ್ತಿದ್ದು, ಕಸದಿಂದಲೂ ಕಾಸು ಮಾಡಲಾಗುತ್ತಿದೆ. ಈ ಮಾದರಿ ಪೌರಾಡಳಿತ ಸಂಸ್ಥೆಗಳೂ ಅನುಸರಿಸಿದರೆ 'ಪಾರಂಪರಿಕ ಕಸ'ದ ಸಮಸ್ಯೆಗೆ ಇತಿಶ್ರೀ ಹಾಡಬಹುದಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಮಡಿಕೇರಿ ಕಸ ವಿಲೇವಾರಿಗೆ ನಿಗದಿಯಾಗಿರುವ ಮೊತ್ತದಲ್ಲಿ ಶೇ. 50ರಷ್ಟು ಪಾಲು ಕೇಂದ್ರ ಸರ್ಕಾರದ್ದಾಗಿದೆ. ರಾಜ್ಯ ಸರ್ಕಾರ ಶೇ.33 ಹಾಗೂ ನಗರಸಭೆ ಶೇ.17ರಷ್ಟು ಮೊತ್ತವನ್ನು ಭರಿಸುತ್ತಿದೆ. ಈ ಕಸವಿಲೇವಾರಿ ಕಾರ್ಯ ಶೀಘ್ರದಲ್ಲಿ ಮುಗಿಸಬೇಕಿದೆ. ಕಸ ವಿಲೇವಾರಿಗೆ ಗುರುತಿಸಲಾಗಿರುವ ಹೊಸ ಸ್ಥಳದಲ್ಲಿ ಅರಣ್ಯ ಇಲಾಖೆ ಮೂಲಕ ಎದುರಾಗಿರುವ ತಾಂತ್ರಿಕ ತೊಂದರೆಯನ್ನು ಸ್ಥಳೀಯ ಶಾಸಕರು ಬಗೆಹರಿಸಿಕೊಡಬೇಕು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಲವು ವರ್ಷಗಳಿಂದ ಇರುವ ಕಸದ ಸಮಸ್ಯೆಯನ್ನು ಪರಿಸರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕಸ ತೆರವು ಕಾರ್ಯ ಕೈಗೊಳ್ಳಲಾಗಿದೆ. ತೆರವು ಕಾರ್ಯ ಪೂರ್ಣಗೊಳಿಸುವ ತನಕವೂ ಕೆಲಸ ನಿಲ್ಲಿಸಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಕೂಡ ಯಾವುದೇ ರೀತಿಯ ತೊಂದರೆ ಆಗಬಾರದು.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಸ್ಟೋನ್ ಹಿಲ್‌ನಲ್ಲಿ ಸಂಗ್ರಹವಾಗಿರುವ ಕಸ ತೆರವಿಗೆ 9 ತಿಂಗಳ ಗುರಿ ನಿಗದಿಪಡಿಸಲಾಗಿದೆ. ಸುಮಾರು 76,636 ಮೆಟ್ರಿಕ್ ಟನ್ ಕಸ ಅಲ್ಲಿ ಸಂಗ್ರಹವಾಗಿರುವುದಾಗಿ ಅಂದಾಜಿಸಲಾಗಿದೆ. ಜೂನ್‌ನಲ್ಲಿ ಮಳೆ ಶುರುವಾಗುವುದರಿಂದ ಇನ್ನು 2 ತಿಂಗಳಲ್ಲಿ ಗರಿಷ್ಠ ಪ್ರಮಾಣದ ತ್ಯಾಜ್ಯವನ್ನು ಅಲ್ಲಿಂದ ತೆರವು ಮಾಡಬೇಕಿದೆ. ಹಾಗಾಗಿ ಆದಷ್ಟು ಶೀಘ್ರ ಕಸವನ್ನು ಅಲ್ಲಿಂದ ಖಾಲಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಹೆಚ್. ಆರ್. ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ