ಜಿಲ್ಲೆ

ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬೇಕಿದೆ-ಸಚಿವ ಮಂಕಾಳ ವೈದ್ಯ ಹೇಳಿಕೆ

ಕಾರವಾರ: ಗ್ಯಾರಂಟಿ ಯೋಜನೆಗಳನ್ನು ಪರುಷ್ಕರಿಸುವ ಬಗ್ಗೆ ಹಿರಿಯರು, ಪರಿಣಿತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬಂದರು, ಒಳನಾಡು ಜಲಸಾರಿಗೆ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತಮಾಡಿದರು.
ಗ್ಯಾರಂಟಿ ಯೋಜನೆ ಫಲ ಪಡೆಯಲು ಯಾವುದೇ ಬೇರೆ ಷರತ್ತು ವಿಧಿಸುವುದಿಲ್ಲ. ಆದರೆ, ಸರ್ಕಾರಿ ನೌಕರರಿಗೆ, ಉಳ್ಳವರಿಗೂ ಯೋಜನೆ ತಲುಪುತ್ತಿದೆ ಎಂಬುದು ಜನರ ಅಭಿಪ್ರಾಯ.
ಕಟ್ಟಕಡೆಯವರಿಗೆ, ಬಡವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ನಿರ್ಧಾರ ಮಾಡಿದ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಸೌಲಭ್ಯಗಳು ಮತ್ತೆ ಉಳ್ಳವರಿಗೆ ಹೋಗಬಾರದು ಎಂಬ ನಿಟ್ಟಿನಲ್ಲಿ ಗೃಹಲಕ್ಷ್ಮೀ ಸೇರಿ ಐದು ಯೋಜನೆಗಳಿಗೆ ಪರಿಷ್ಕರಣೆ ಮಾಡುತ್ತಿದ್ದೇವೆ. ಅಧಿಕಾರಿಗಳು ಮಾನದಂಡ ನಿರ್ಧಾರ ಮಾಡುತ್ತಾರೆ. ರಾಜಕಾರಣಕ್ಕೂ ಐದು ಗ್ಯಾರಂಟಿಗೂ ಸಂಬಂಧ ಇಲ್ಲ. ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ರಾಜ್ಯದ ಜನ ನೆಮ್ಮದಿಯಿಂದ ಇರಬೇಕು ಎಂಬ ಉದ್ದೇಶ ಹೊಂದಿದ್ದು, ನಾವು ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದರು.