ಜಿಲ್ಲೆ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಪ್ರಾಧಿಕಾರ, ಮಹಾನಗರ ಪಾಲಿಕೆ ಸಮಿತಿ ವತಿಯಿಂದ ಪೂರ್ವ ವಿಧಾನ ಸಭಾ ಕ್ಷೇತ್ರ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮಾಸಿಕ ಸಭೆ ಮಹಾನಗರ ಪಾಲಿಕೆ ಸಭಾ ಭವನದಲ್ಲಿ ಶುಕ್ರವಾರ ಜರುಗಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ವಾದಿರಾಜ ಕುಲಕರ್ಣಿ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ಬದಲು 10 ಕೆಜಿ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 5 ಕೆ.ಜಿ. ಅಕ್ಕಿಯನ್ನು ಒಎಂಎಸ್ಎಸ್ ಯೋಜನೆ ಅಡಿಯಲ್ಲಿ ಖರೀದಿಸಲಾಗಿದ್ದು, ಈ ತಿಂಗಳಿನಿಂದಲೇ ವಿತರಿಸಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಆಹಾರ ಇಲಾಖೆ ಎಡಿ ಡಾ. ವಸುಂಧರಾ ಹೆಗಡೆ ಮಾತನಾಡಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನ 15 ಕೆಜಿ ಅಕ್ಕಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ವಿತರಿಸಲಾಗುವುದು ಎಂದರು.

ಯುವನಿಧಿ ನೋಂದಣಿ ಸ್ಥಳ ಹಾಗೂ ದಿನಾಂಕವನ್ನು 15 ದಿನ ಮುಂಚೆ ತಿಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪೂರ್ವ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರಶೀದ್ ಭೋಲಾಭಾಯ್, ವೀರಭದ್ರಯ್ಯಾ ಹಿರೇಹಾಳ, ಫಕೀರಪ್ಪ ದೊಡಮನಿ, ಮಂಜುನಾಥ ಮಟ್ಟಿ, ದಾವಲಸಾಬ್ ನದಾಫ್, ಯಲ್ಲಪ್ಪ ಮೆಹರವಾಡೆ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಗಣಿ ವಲಿ ಅಹ್ಮದ್ ಹಾಗೂ ಸದಸ್ಯರಾದ ಬಾಳಮ್ಮ ಜಂಗಿನವರ, ಕಲಾವತಿ ದತ್ತವಾಡ, ಉಪ ಆಯುಕ್ತ ಸಬರದ, ಪ್ರವಿಣ, ವಿರೇಶ ಬಳ್ಳಾರಿ, ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.