ಜಿಲ್ಲೆ

ಪೌರ ನೌಕರರ ಬೇಡಿಕೆ ಈಡೇರಿಕೆಗೆ ಗಂಟಿಹೊಳೆ ಆಗ್ರಹ

ಕುಂದಾಪುರ: ಪೌರ ನೌಕರರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಕೂಡಲೇ ಆಲಿಸಿ, ಈಡೇರಿಸಬೇಕೆಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶುಕ್ರವಾರ ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಪೌರ ನೌಕರರು ಕಚೇರಿ ಕೆಲಸವನ್ನು ಬದಿಗೊತ್ತಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಂಬಂದಿಸಿದ ಕಚೇರಿಯ ಯಾವುದೇ ಕೆಲಸ ನಡೆಯುತ್ತಿಲ್ಲ. ಮಳೆಗಾಲದ ಈ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಡೆಯದಿದ್ದರೆ ಸಾಂಕ್ರಾಮಿಕ ರೋಗ ಭೀತಿ ಎದುರಾಗವ ಸಾಧ್ಯತೆ ಇದೆ. ಪೌರ ನೌಕರರ ಪ್ರತಿಭಟನೆಯನ್ನು ಸರ್ಕಾರ ಲುವಾಗಿ ಪರಿಗಣಿಸದೆ ಅವರ ನ್ಯಾಯಯುತ ಬೇಡಿಕಗಳನ್ನು ಕೂಡಲೇ ಈಡೇರಿಸಬೇಕು. ವಿಶೇಷವಾಗಿ ಪೌರ ನೌಕರರ ನೇಮಕಾತಿಯನ್ನು ಕಾಯಂಗೊಳಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರನ್ನು ಆಗ್ರಹಿಸಿದ್ದಾರೆ.