ಬೆಂಗಳೂರು: ಕುದುರೆಮುಖ ಐರನ್ ಓರ್ ಕಂಪನಿ ಲಿ.ಗೆ (ಕೆಐಒಸಿಎಲ್) ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಗಂಟಿ ವೆಂಕಟ್ ಕಿರಣ್ ಅಧಿಕಾರ ವಹಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ 34 ವರ್ಷಗಳ ಅನುಭವ ಹೊಂದಿರುವ ಇವರು, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಸಂಪಾದಿಸಿದ್ದಾರೆ. ಭೂಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್. ಮುಗಿಸಿದ ಬಳಿಕ ಎಂ.ಟೆಕ್. ಕೋರ್ಸ್ ಪೂರೈಸಿದ್ದಾರೆ. ಕೆಐಒಸಿಎಲ್ಗೆ ಸೇರುವ ಮುನ್ನ ಉಕ್ಕು ಮತ್ತು ಗಣಿಗಾರಿಕೆ ವಲಯಗಳಲ್ಲಿನ ಪ್ರಮುಖ ಸಂಸ್ಥೆಗಳಲ್ಲಿ ಹಲವು ಹುದ್ದೆ ಅಲಂಕರಿಸಿದ್ದರು. ಒಡಿಶಾದ ಬಿಆರ್ಪಿಎಲ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದ ವೇಳೆ ಪ್ರಮುಖ ಯೋಜನೆ ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎಸ್ಸಾರ್ ಸ್ಟೀಲ್ ಲಿ.ನಲ್ಲಿ ಉಪಾಧ್ಯಕ್ಷರಾಗಿ ಹಾಗೂ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ.