ಜಿಲ್ಲೆ

38.56 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಬುಧವಾರ ದಾಳಿ ನಡೆಸಿದ ಆರ್​ಪಿಎಫ್ ಸಿಬ್ಬಂದಿ, 38,56,600 ರೂ. ಮೌಲ್ಯದ 46.958 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶಾಲಿಮಾರ-ವಾಸ್ಕೊ ರೈಲಿನಲ್ಲಿ ಸಾಗಿಸುತ್ತಿದ್ದ 4,21,100 ರೂ. ಮೌಲ್ಯದ 4.211 ಕೆಜಿ ಗಾಂಜಾವನ್ನು ಲೋಂಡಾ ನಿಲ್ದಾಣದಲ್ಲಿ, ಬೆಂಗಳೂರಿನ ಎಸ್​ಎಂವಿಟಿ ರೈಲು ನಿಲ್ದಾಣದ 6ನೇ ಪ್ಲಾಟ್​ಫಾಮರ್್​ನಿಂದ 16.01 ಲಕ್ಷ ರೂ. ಮೌಲ್ಯದ 22.942 ಕೆಜಿ ಗಾಂಜಾವನ್ನು, ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವಂಗೋತಿ ನಿಲ್ದಾಣದಲ್ಲಿ 7.04 ಲಕ್ಷ ರೂ. ಮೌಲ್ಯದ 8.5 ಕೆಜಿ ಗಾಂಜಾ, ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಶಾಲಿಮಾರ-ವಾಸ್ಕೋ ಎಕ್ಸ್​ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 11,30,500 ರೂ. ಮೌಲ್ಯದ 11.305 ಕೆಜಿ ಗಾಂಜಾವನ್ನು ಆರ್​ಪಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರೈಲಿನಲ್ಲಾಗಲಿ ಅಥವಾ ರೈಲು ನಿಲ್ದಾಣದಲ್ಲಾಗಲಿ ಗಾಂಜಾವನ್ನು ಸಾಗಿಸುತ್ತಿದ್ದವರು ಆರ್​ಪಿಎಫ್ ಸಿಬ್ಬಂದಿಗೆ ಸಿಕ್ಕಿಲ್ಲ. ಈ ಕುರಿತು ಆರ್​ಪಿಎಫ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.