ಜಿಲ್ಲೆ

1.04 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

ಮರಿದೇವ ಹೂಗಾರ

ಹುಬ್ಬಳ್ಳಿ: ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್‌ಪ್ರೆಸ್ ರೈಲ್ವೆಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಇಲ್ಲಿಯ ರೈಲ್ವೆ ಠಾಣೆ ಪೊಲೀಸರು, 1.04 ಲಕ್ಷ ರೂ. ಮೌಲ್ಯದ 19ಕೆಜಿ 356 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಸಿಪಿಐ ಸುರೇಶ ಕುಂಬಾರ ನೇತೃತ್ವದಲ್ಲಿ ಸಿಬ್ಬಂದಿ ಬಸವರಾಜ ಯಕ್ಕಣ್ಣವರ, ಅನಿಲಗೌಡ ಮೂಲಿಮನಿ, ಮಹಮ್ಮದ್ ಯುಸೂಫ್ ನದಾಫ್ ದಾಳಿ ಮಾಡಿದ್ದರು. ಅಂಗವಿಕಲರ ಬೋಗಿಯ ಸೀಟಿನ ಕೆಳಗೆ ಬ್ಯಾಗ್‌ನಲ್ಲಿ ಗಾಂಜಾ ಜಪ್ತಿ ಮಾಡಿದ್ದು, ಎನ್‌ಡಿಪಿಎಸ್ ಅಡಿ ಪ್ರಕರಣ ದಾಖಲಾಗಿದೆ.