ಮಂಗಳೂರು: ಅಪ್ಪರ್ ಬೆಂದೂರಿನ ರಸ್ತೆ ಬದಿಯಲ್ಲಿ ುಡ್ ಡೆಲಿವರಿ ಹೆಸರಿನಲ್ಲಿ ಬ್ಯಾಗ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಕದ್ರಿ ಠಾಣೆ ವಶಕ್ಕೆ ಪಡೆದಿದ್ದಾರೆ.
ಕೇರಳದ ತ್ರಿಶ್ಶೂರು ಜಿಲ್ಲೆಯ ಮಹಮ್ಮದ್ ಜಾಸೀಮ್ ಕೆ.ಎ (20) ಮತ್ತು ಕೊಲ್ಲಂ ಜಿಲ್ಲೆಯ ಅಲ್ ಅನೀಶ್ (21) ಬಂಧಿತ ಆರೋಪಿಗಳು. ಅಪ್ಪರ್ ಬೆಂದೂರು 1ನೇ ಕ್ರಾಸ್ ಮೋಹನ್‌ಬಾಗ್ ಹಿಂಬದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿ ಲಾಭ ಗಳಿಸುವ ಅಂದಾಜು ಮಾಡಿದ್ದರು.
ಬಂಧಿತರಿಂದ 40 ಸಾವಿರ ರೂ. ಮೌಲ್ಯದ 1.38 ಕೆ.ಜಿ. ಗಾಂಜಾ, ಡಿಜಿಟಲ್ ತೂಕ ಮಾಪನ, ಸ್ಕೂಟರ್, ಎರಡು ಮೊಬೈಲ್ ೆನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.