ಜಿಲ್ಲೆ

ಮಾದನಾಯಕನಹಳ್ಳಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ: ಪೊಲೀಸರ ಬಲೆಗೆ ಬಿದ್ರು ಇಬ್ಬರು

ನೆಲಮಂಗಲ: ಡ್ರಗ್ಸ್​, ಮಾದಕ ವಸ್ತುಗಳ ಕೇಸ್​ಗಳ ವಿಚಾರವನ್ನು ಇಡೀ ರಾಜ್ಯವೇ ಗಮನಿಸುತ್ತಿದೆ. ಪೊಲೀಸರು ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದರೂ ಮಾದನಾಯಕನಹಳ್ಳಿಯ ಹನುಮಂತೇಗೌಡ ಪಾಳ್ಯದಲ್ಲಿ ರಸ್ತೆ ಬದಿಯಲ್ಲೇ ರಾಜಾರೋಷವಾಗಿ ಗಾಂಜಾ ಮಾರಾಟ ನಡೆಯುತ್ತಿತ್ತು, ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಸಿದ್ಧನಹೊಸಹಳ್ಳಿಯ ಭೀಮೇಶ್ವರ ಕಾಲನಿ ನಿವಾಸಿ ಮಂಜುನಾಥ್ (24), ಮಾದನಾಯಕನಹಳ್ಳಿ ಗ್ರಾಮದ ಜನತಾ ಕಾಲನಿ ನಿವಾಸಿ ಸಿದ್ಧಿಕ್ ಪಾಷಾ (20) ಬಂಧಿತರು. 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ವೃತ್ತನಿರೀಕ್ಷಕ ಕೆ.ಪಿ. ಸತ್ಯನಾರಾಯಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.