ಕೆಜಿಎಫ್: ರಾಬರ್ಟ್‌ಸನ್‌ಪೇಟೆ ಪೊಲೀಸರು ಗಾಂಜಾ ವಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆರೋಪಿಯೊಬ್ಬನನ್ನು ಬಂಧಿಸಿ 5.20 ಲಕ್ಷ ರೂ.ಮೌಲ್ಯದ 6.565 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ವಾಸಿ ಮೊಲುಗು ಗಣೇಶ್ ಬಂಧಿತ.
ನಗರದ ಮಲ್ಲಂಪಲ್ಲಿ ಕಡೆಯಿಂದ ಬೇತಮಂಗಲ ಕಡೆ ಹೋಗುವ ರಸ್ತೆಯ ಪಕ್ಕದ ಜಮೀನಿನಲ್ಲಿ ಗಾಂಜಾ ವಾರಾಟ ವಾಡುತ್ತಿದ್ದರ ಬಗ್ಗೆ ಖಚಿತ ವಾಹಿತಿ ಆಧರಿಸಿ, ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ಪಿಎಸ್‌ಐ ಎಂ.ತ್ಯಾಗರಾಜ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದರು. ಆರೋಪಿ ಬಳಿ ಇದ್ದ ಮಾಲು ವಶಕ್ಕೆ ಪಡೆದ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್‌ಪಿ ಎಸ್.ಪಾಂಡುರಂಗ ಮತ್ತು ರಾಬರ್ಟ್‌ಸನ್‌ಪೇಟೆ ಸಿಪಿಐ ಪಿ.ಎಂ.ನವೀನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಂ.ತ್ಯಾಗರಾಜ್ ಇದ್ದರು..
ಕೋಲಾರ: ನಗರ ಹೊರವಲಯದ ಗಾಜಲದಿನ್ನೆ ಬಳಿ ಜೂಜು ಅಡ್ಡೆ ಮೇಲೆ ಕೋಲಾರ ಗ್ರಾವಾಂತರ ಠಾಣೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿ, 6,300 ರೂ. ನಗದು, 52 ಇಸ್ಪೀಟ್ ಎಲೆ ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಕೋಲಾರಮ್ಮ ಬಡಾವಣೆಯ ಹನುವಾನ್, ಕುರುಬರಪೇಟೆ ರಾಜೇಶ್, ಧರ್ಮರಾಯ ನಗರದ ಮಂಜುನಾಥ್, ಗಲ್‌ಪೇಟೆ ವಿನಯ್, ಕೋಟೆ ಬಡಾವಣೆಯ ಸೋಮಶೇಖರ್ ಹಾಗೂ ವೆಂಕಟಶಿವ ಬಂಧಿತರು. ಎಸ್ಪಿ ಬಿ.ನಿಖಿಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್ ವಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್.ನಾಗ್ತೆ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಕಾಂತ್‌ರಾಜ್, ಪಿಎಸ್‌ಐ ಭಾರತಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ತಂಡದ ಕಾರ್ಯವನ್ನು ಎಸ್ಪಿ ಶ್ಲಾಸಿದ್ದಾರೆ.