ಜಿಲ್ಲೆ

ಮಾದಕ ವಸ್ತು ಸೇವನೆ ಆರೋಪಿ ಬಂಧನ

ಹರೀಶ ಎಂ.

ಮಂಗಳೂರು: ನಗರದ ಲೇಡಿಹಿಲ್ ಹೊಟೇಲ್‌ವೊಂದರ ಸಮೀಪ ಮಾದಕ ವಸ್ತು ಸೇವನೆ ಆರೋಪದ ಮೇಲೆ ಯುವಕನೊಬ್ಬನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.


ಕೊಂಚಾಡಿ ದೇರೆಬೈಲ್ ನಿವಾಸಿ ಉದಿತ್ (24) ಬಂಧಿತ ಆರೋಪಿ.
ಗುರುವಾರ ಮಧ್ಯಾಹ್ನ 12.30ಕ್ಕೆ ನಗರದ ಲೇಡಿಹಿಲ್ನ ಹೊಟೇಲ್ ಸಿ ವ್ಯೆವ್ ಬಳಿ ನಿಂತಿದ್ದ ಯುವಕ ಮಾದಕ ಸೇವನೆ ಮಾಡಿದ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಳಿಕ ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.


ಆರೋಪಿ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ಕೇಸು ದಾಖಲಾಗಿದೆ.