ಜಿಲ್ಲೆ

ಗಾಂಜಾ ಸೇವನೆ ಮೂವರ ಬಂಧನ

reportermng

ಮಂಗಳೂರು: ನಗರದ ಗೋರಿಗುಡ್ಡೆ ಸ್ಮಾಶಾನದ ಬಳಿ ರಸ್ತೆ ಬದಿಯ ಮರದ ಮರೆಯಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.


ರಜತ್ ವಿ. (22), ಮುಹಿನುದ್ದೀನ್ ಪಿ.ಎಂ. (22), ಅಧ್ವೈತ್ (20) ಬಂಧಿತರು. ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.