ಜಿಲ್ಲೆ

ಗಾಂಜಾ ಸೇವನೆ ಆರೋಪಿ ಬಂಧನ

ಮಂಗಳೂರು: ನಗರದ ಮಠದಕಣಿ ಬ್ಯಾಂಕ್ ಬಳಿ ಗಾಂಜಾ ಸೇವನೆ ಮಾಡಿದ್ದ ಬೊಕ್ಕಪಟ್ಟಣದ ತ್ರಿಶೂಲ್ (21) ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.