ಜಿಲ್ಲೆ

ಗಾಂಜಾ ಪ್ರಕರಣ ಹಲವರ ಬಂಧನ

Dharwada - Basavaraj Idli

ಹುಬ್ಬಳ್ಳಿ: ನಗರದಲ್ಲಿ ಎರಡು ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣದಲ್ಲಿ ಪೊಲೀಸರು ಹಲವು ಜನರನ್ನು ಬಂಧಿಸಿದ್ದಾರೆ.

ಇಲ್ಲಿಯ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಇನ್ಸಪೆಕ್ಟರ್ ಎಂ.ಎಸ್. ಹೂಗಾರ ಅವರ ನೇತತ್ವದಲ್ಲಿ ದಾಳಿ ಮಾಡಿ ಮೂವರನ್ನು ಬಂಧಿಸಲಾಗಿದೆ.

ಗಾಂಜಾ ಹಾಗೂ ಒಂದು ಸ್ಕೂಟಿ, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಗಿರಣಿಚಾಳನ ಕಿರಣಕುಮಾರ ಬಮ್ಮಣಗಿ, ಲಕ್ಷ್ಮಣ ನಿಡಗುಂದಿ, ತೊರವಿಹಕ್ಕಲದ ಯಾಜ್ ಊಂಟವಾಲೆ ಎಂದು ಗುರುತಿಸಲಾಗಿದೆ.

ಉಪನಗರ ಠಾಣೆ ವ್ಯಾಪಿಯ ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ಕೇಶ್ವಾಪುರದ ಹರ್ಷಿತ್ ವಾಲ್ಮೀಕಿ, ಸಮಂತ್ ಪೂಜಾರ ಬಂಧಿತರು. ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.