ಜಿಲ್ಲೆ

ಅಕ್ರಮ ಗಾಂಜಾ ಸಾಗಾಟ, ಬಂಧನ

Udupi

ಕೋಟ: ಕೋಟದಿಂದ ಪಡುಕರೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಓರ್ವನನ್ನು ಸೋಮವಾರ ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.
ಕೋಟತಟ್ಟು ಪಡುಕರೆಯ ಇಬ್ರಾಹಿಂ ಅಲಿಯಾಸ್ ಆಕಾಶವಾಣಿ ಇಬ್ರಾಹಿಂ ಎಂದು ಗುರುತಿಸಲಾಗಿದ್ದು ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿರುವಾಗ ಕೋಟದ ವರುಣತೀರ್ಥ ಕೆರೆ ಸಮೀಪ ತಡೆದು ಸೆರೆಹಿಡಿಯಲಾಗಿದೆ. 1.45 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಸ್ಥಳಕ್ಕೆ ಬ್ರಹ್ಮಾವರ ತಹಸಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಠಾಣೆಯಲ್ಲಿ ತನಿಖೆ ಪ್ರಗತಿಯಲ್ಲಿದೆ.