ಜಿಲ್ಲೆ

ಗಾಂಜಾ ಸಾಗಾಟ, ಜೀಪು ನಿಲ್ಲಿಸದೆ ಪರಾರಿ

ಸೌಮ್ಯ ಆರ್

ಬಂಟ್ವಾಳ: ಗಾಂಜಾ ಸಾಗಾಟ ಮಾಡುತ್ತಿರುವ ಮಾಹಿತಿಯನ್ವಯ ಅಬಕಾರಿ ಪೊಲಿಸರು ಬಿ.ಸಿ.ರೋಡಿನಲ್ಲಿ ವಾಹನ ತಪಾಸಣೆಗೆ ಜೀಪು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಅತಿ ವೇಗದಿಂದ ಕೊಂಡೊಯ್ದು ಆರೋಪಿಗಳು ಪರಾರಿಯಾಗಿದ್ದಾರೆ.

ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಅವರು ಸೆ.25ರಂದು ಕರ್ತವ್ಯದಲ್ಲಿದ್ದಾಗ ಸಂಜೆ 5.20ರ ವೇಳೆಗೆ ಬೊಲೋರೋ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದು, ವಾಹನವನ್ನು ತಪಾಸಣೆ ಮಾಡುವಂತೆ ಅಬಕಾರಿ ಆಯುಕ್ತರು ನಿರ್ದೇಶನ ನೀಡಿದ್ದರು. ಅದರಂತೆ ಸಿಬ್ಬಂದಿಯೊಂದಿಗೆ ಕಾಯುತ್ತಿರುವಾಗ ಮಂಗಳೂರು ಕಡೆಯಿಂದ ಬಂದ ಪಿಕ್‌ಅಪ್ ನಿಲ್ಲಿಸಲು ಸೂಚನೆ ನೀಡಿದರೂ ಅಬಕಾರಿ ಇಲಾಖಾ ವಾಹನವನ್ನು ನೋಡಿದ ಪಿಕ್‌ಅಪ್ ಚಾಲಕ ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ವಾಹನವನ್ನು ಪಾಣೆಮಂಗಳೂರು ಹಳೇ ಸೇತುವೆಯಿಂದ ಚಲಾಯಿಸಿಕೊಂಡು ಹೋಗಿ ನಂದಾವರ ರೈಲ್ವೆ ಟ್ರಾೃಕ್ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.