ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದ ಟ್ರಕ್ ಪಾಕಿರ್ಂಗ್ ಏರಿಯಾದ ಸರ್ವೀಸ್ ರಸ್ತೆ ಬದಿಯಲ್ಲಿ ಗಾಂಜಾ ಗಿಡ ನೆಟ್ಟು ಬೆಳೆಸಿರುವುದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕುಂಬಳೆ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಕೆ.ವಿ.ಶ್ರಾವಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 90 ಸೆಂ.ಮೀ. ಉದ್ದದ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಎನ್.ಡಿ.ಪಿ.ಸಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ. ಗಾಂಜಾ ಬೆಳೆಸಿದವರ ಬಗ್ಗೆ ವಾಹಿತಿ ಲಭಿಸಿಲ್ಲ.
ಹೆದ್ದಾರಿ ಬದಿ ಅಂತಾರಾಜ್ಯ ಪರವಾನಗಿಯ ಟ್ರಕ್‌ಗಳು ಪಾರ್ಕ್ ಮಾಡುತ್ತಿದ್ದು, ಚಾಲಕರು ವಿಶ್ರಾಂತಿ ಪಡೆಯುವ ಕಾರಣ, ಉತ್ತರ ಭಾರತದಿಂದ ಗಿಡ ತಂದು ನೆಟ್ಟಿರಬಹುದೆಂಬ ಸಂಶಯ ಮೂಡುವಂತೆ ಮಾಡುವ ನಿಟ್ಟಿನಲ್ಲಿ ಸ್ಥಳೀಯರು ಗಾಂಜಾ ಬೆಳೆಸಿರುವ ಸಾಧ್ಯತೆಯಿರುವುದಾಗಿ ಮಾಹಿತಿ ಲಭಿಸಿದೆ. ತನಿಖೆಯ ಮೊದಲ ಹಂತದಲ್ಲಿ ಹೆದ್ದಾರಿ ವಿಭಾಗ ಹಾಗೂ ಆಸುಪಾಸಿನ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.