ಜಿಲ್ಲೆ

ಗಾಂಜಾ ಸೇವಿಸುತ್ತಿದ್ದವರ ಬಂಧನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಜಾಲದ ವಿರುದ್ಧ ಹೋರಾಟ ಮುಂದುವರಿಸಿರುವ ಕೊಡಗು ಪೊಲೀಸರು ಮಡಿಕೇರಿಯ ದೇಚೂರಿನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ಡೆಕೋರೇಷನ್ ಕೆಲಸ ಮಾಡುವ ದೇಚೂರಿನ ಪ್ರತಾಪ್ ಎಚ್. ಎಸ್. (22) ಇಬ್ನಿವಳವಾಡಿ ಗ್ರಾಮದ ಮೋನಿಶ್ ಐ. ಆರ್. (20), ಕರ್ಣಗೇರಿ ಗ್ರಾಮದ ಲಿಖಿತ್ ಡಿ. (23) ಅಕ್ಷಯ್ ಪಿ. ಎಸ್.(23) ಕಣಂಗೇರಿ ಗ್ರಾಮ ಇವರನ್ನು ಬಂಧಿಸಲಾಗಿದೆ.

ಕಾರ್ಯಾಚರಣೆ ವಿಶೇಷ ತಂಡದಲ್ಲಿ ಡಿವೈಎಸ್‌ಪಿ ಗಂಗಾಧರಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ, ಮಡಿಕೇರಿ ನಗರ ಠಾಣಾಧಿಕಾರಿ ಶ್ರೀನಿವಾಸ್, ಅಪರಾಧ ಪತ್ತೆದಳದ ಪಿಎಸ್‌ಐ ಎಂ. ಬಿ ರಾಧಾ ಹಾಗೂ ಸಿಬ್ಬಂದಿ ಇದ್ದರು.