ಜಿಲ್ಲೆ

VIDEO| ಸಿಎಂ, ಡಿಸಿಎಂ ಮನೆ ಹತ್ತಿರವೇ ಬಡಿದಾಡಿಕೊಂಡ ಪುಂಡರ ಗ್ಯಾಂಗ್​...!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪುಡಾರಿಗಳ ಪುಂಡಾಟ ಮಿತಿಮೀರಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮನೆ ಹತ್ತಿರವೇ ಬಡಿದಾಡಿಕೊಂಡಿದ್ದಾರೆ.

ಎರಡು ಗ್ಯಾಂಗ್​ಗಳ ನಡುವೆ ನಡುರಸ್ತೆಯಲ್ಲಿ ಹೊಡೆದಾಟ ನಡೆದಿರುವ ಘಟನೆ ನಗರದ ಡಾಲರ್ಸ್ ಕಾಲೋನಿಯಲ್ಲಿ ಬುಧವಾರ ನಡೆದಿದೆ. ಬಡಿದಾಟದ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕೇವಲ 500 ಮೀಟರ್ ದೂರದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರ ಮನೆ ಇದೆ. ಇದೇ ಏರಿಯಾದಲ್ಲಿ ಪುಂಡಾಟ ಮಾಡುತ್ತಾರೆಂದರೆ ಬೇರೆ ಏರಿಯಾದ ಪರಿಸ್ಥಿತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪೊಲೀಸರು ಕರೊನಾ ಕಡೆ ಗಮನ ನೀಡಿರುವುದರಿಂದ ಪುಂಡರು ಬಾಲ ಬಿಚ್ಚಿದ್ದಾರೆ. ಹಾಕಿ ಸ್ಟಿಕ್, ದೊಣ್ಣೆ ಹಾಗೂ ಬೆಲ್ಟ್​ಗಳಿಂದ ಪರಸ್ಪರ ಹೊಡೆದಾಡಿದ್ದಾರೆ. ಅಲ್ಲದೆ, ಇಬ್ಬರನ್ನು ನೆಲಕ್ಕೆ ಹಾಕಿ ತುಳಿದು ಮತ್ತೊಂದು ಗುಂಪು ಹಲ್ಲೆ ನಡೆಸಿದೆ. ನೂರಾರು ಜನರ ಮುಂದೆಯೇ ಗ್ಯಾಂಗ್​ವಾರ್​ ನಡೆದಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ವಿಡಿಯೋ ಪರಿಶೀಲನೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಪಡ್ಡೆ ಹುಡುಗ್ರು ಬ್ಲೂಫಿಲ್ಮ್​ಗೆ ಕಾದು ಕೊನೆಗೆ ಏನಿಲ್ಲ ಎಂಬತಾಯಿತು: ಉಪ್ಪಿ ಫ್ಯಾನ್ಸ್​ ಕಾಲೆಳೆದ ಅನುಪಮಾ!