ಗಂಗಾವತಿ: ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತಿದೆ. ಯೋಗ ಸಾಧನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕಲ್ಯಾಣ ಕರ್ನಾಟಕ ವಿಭಾಗದ ಅಮೃತ ಸೇವಾ ಶಿಕ್ಷಣ ಟ್ರಸ್ಟ್ ಮುಖ್ಯಸ್ಥ ನರಸಿಂಹ ವೈದ್ಯ ಹೇಳಿದರು.
ನಗರದ ಬಾಲಕಿಯರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಶ್ರೀಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಮತ್ತು ಸ್ನೇಹ ಬಳಗ ಯೋಗ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಪರಂಪರೆಯಿಂದಲೂ ಯೋಗಕ್ಕೆ ಮಹತ್ವವಿದ್ದು, ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಯೋಗಾಸನಗಳ ಹಿಂದಿನ ವೈಜ್ಞಾನಿಕ ಹಿನ್ನೆಲೆ ಗಮನಿಸಬೇಕದ್ದು, ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರಗಳಿವೆ ಎಂದರು. ಯೋಗಾಸನ ಪ್ರದರ್ಶನದ ಮೂಲಕ ಆರೋಗ್ಯ ಭಾಗ್ಯದ ಮಹತ್ವ ತಿಳಿಸಿದರು.
ಯೋಗ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಹಾಪುರ ಆಯುಷ್ ಯೋಗ ತರಬೇತುದಾರ ರಾಘವೇಂದ್ರ ಪತ್ತಾರ, ಮಲ್ಲಾಪುರ ಆಯುಷ್ ವೈದ್ಯಾಧಿಕಾರಿ ಡಾ.ರಾಜಶೇಖರ್ ನಾರಿನಾಳ್, ಸ್ನೇಹ ಬಳಗದ ಗೌರವಾಧ್ಯಕ್ಷ ಸಂಗಮೇಶ ಕೋಟಿ, ಸದಸ್ಯರಾದ ವಾಸುದೇವ ಅರಸಿದ್ದಿ, ಎಸ್.ಶಾಮಮೂರ್ತಿ ಐಲಿ, ವೆಂಕೋಬಣ್ಣ, ಶೆಕ್ಷಾವಲಿ, ಮರೇಗೌಡ, ಆನಂದ ಪಟ್ಟಣಶೆಟ್ಟಿ ಇತರರಿದ್ದರು.