ಗಂಗಾವತಿ: ಕಾರ್ಮಿಕರ ಗುರುತಿನ ಚೀಟಿ ನವೀಕರಣ ಸರಳೀಕರಿಸುವಂತೆ ಒತ್ತಾಯಿಸಿ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಕಾರ್ಮಿಕ ನಿರೀಕ್ಷಕ ಎಂ.ಅಶೋಕ್‌ಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮಾತನಾಡಿ, ಹೋರಾಟದ ಲದಿಂದ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿದ್ದರಿಂದ ವಿದ್ಯಾಭ್ಯಾಸ ಮೊಟಕುಗೊಳಿಸಲಾಗುತ್ತಿದೆ. ಮಂಡಳಿ ಯಲ್ಲಿನ ಅನುದಾನ ದುರ್ಬಳಕೆ ಯಾಗಿರುವ ಬಗ್ಗೆ ದೂರುಗಳಿದ್ದು, ಸಮಗ್ರ ತನಿಖೆ ಯಾಗಬೇಕು. ಇಲಾಖೆ ತತ್ರಾಂಶ ದೋಷಪೂರಿತವಾಗಿದ್ದು, ಸರಿಪಡಿಸಬೇಕು. ಅನಗತ್ಯ ಸೌಲಭ್ಯದ ಬದಲಾಗಿ ಆರೋಗ್ಯ ಮತ್ತು ಶೈಕ್ಷಣಿಕ ಉತ್ತೇಜನ ಯೋಜನೆಗಳಿಗೆ ಅನುದಾನ ಮೀಸಲಿಡಬೇಕು. ಬಾಕಿ ಶೈಕ್ಷಣಿಕ ಸಹಾಯಧನ ಬಿಡುಗಡೆಗೊಳಿಸಬೇಕು.
ಹೊಸ ಗುರುತಿನ ಚೀಟಿ ಮತ್ತು ನವೀಕರಣ ಸರಳೀಕರಿಸಬೇಕು. ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ಘೋಷಿತ ಸೌಲಭ್ಯಗಳನ್ನು ಖಾತ್ರಿಪಡಿಸಬೇಕೆಂದು ಒತ್ತಾಯಿಸಿದರು.
ಸಮಿತಿ ಪದಾಧಿಕಾರಿ ಗಳಾದ ಶರಣು ಪಾಟೀಲ್, ಸುರೇಶ್ ಉಪ್ಪಾರ, ಹನುಮಂತ ಕಿನ್ನಾಳ, ಶಾಮ್ ಸುಂದರ್, ಹನುಮಂತ ವಡ್ಡರ್, ಶರಣಪ್ಪ ಉಪ್ಪಾರ, ನಾಗಮ್ಮ, ಹುಲಿಗೆಮ್ಮ, ಗಂಗಮ್ಮ ಗೌಡರ್, ಶರಣಮ್ಮ ಪೊ.ಪಾಟೀಲ್, ಹನುಮಂತ ಉಪ್ಪಾರ ಇತರರಿದ್ದರು.