ಗಂಗಾವತಿಯ ಬಾಲಕಿಯರ ಸ.ಹಿ.ಪ್ರಾ.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಆರೋಗ್ಯ ಮತ್ತು ಕ್ಷೇಮ ತರಬೇತಿ ಕಾರ್ಯಾಗಾರನ್ನು ನೋಡಲ್ ಅಧಿಕಾರಿ ರಾಮಪ್ಪ ಕಾಂಬ್ಳಿ ಗುರುವಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಲಿಂಗೇಶ ಪೂಲಭಾವಿ, ಅಬೀದ್, ರಾಜೇಶ್ವರಿ, ಪ್ರವೀಣ ಇತರರಿದ್ದರು.  
ಜಿಲ್ಲೆ

ಮಕ್ಕಳ ಆರೋಗ್ಯ ರಕ್ಷಣೆ ಆದ್ಯತೆಯಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಕಲಿಕೆ ಜತೆಗೆ ಮಕ್ಕಳ ಆರೋಗ್ಯ ರಕ್ಷಣೆಯತ್ತ ಶಿಕ್ಷಕರು ಗಮನಹರಿಸಬೇಕಿದ್ದು, ಆಯುಷ್ಮಾನ್ ಭಾರತ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಸಂಪನ್ಮೂಲ ಶಿಕ್ಷಕ ಸಿದ್ದಲಿಂಗೇಶ ಪೂಲಭಾವಿ ಹೇಳಿದರು.

ನಗರದ ನೀಲಕಂಠೇಶ್ವರ ವೃತ್ತದ ಬಳಿ ಬಾಲಕಿಯರ ಸ.ಹಿ.ಪ್ರಾ.ಶಾಲೆಯ ಅಜೀಂ ಪ್ರೇಮ್‌ಜಿ ೌಂಡೇಷನ್ ತರಗತಿ ಕೊಠಡಿಯಲ್ಲಿ ರಾಜ್ಯ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯ, ಮುನಿರಾಬಾದ್‌ನ ಡಯಟ್ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಆರೋಗ್ಯ ಮತ್ತು ಕ್ಷೇಮ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಕ್ಕಳ ಕಲಿಕೆ ಅನುಗುಣ ಬೋಧನಾ ಪ್ರಕ್ರಿಯೆಗೆ ಆದ್ಯತೆ ನೀಡಬೇಕಿದ್ದು, ದೈಹಿಕ ಮತ್ತು ಮಾನಸಿಕ ಸದೃಢತೆ ಪೂರಕ ಯೋಜನೆಗಳ ಬಗ್ಗೆ ಗಮನಹರಿಸಬೇಕಿದೆ ಎಂದರು.

ತರಬೇತಿ ಕಾರ್ಯಾಗಾರ ಕುರಿತು ನೋಡಲ್ ಅಧಿಕಾರಿ ರಾಮಪ್ಪ ಕಾಂಬ್ಳಿ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಅಬೀದ್, ಬಿಆರ್‌ಸಿಗಳಾದ ಅಯ್ಯಪ್ಪ, ದೇವೇಂದ್ರಪ್ಪ, ಶರಣಪ್ಪ ನಾಯಕ್, ರಾಜೇಶ್ವರಿ, ಪ್ರವೀಣ ಇತರರಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರಿಗಾಗಿ ಐದು ದಿನ ತರಬೇತಿ ಕಾರ್ಯಾಗಾರನ್ನು ಮಾನವ ಸಂಪನ್ಮೂಲ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಪ್ರಾಯೋಜಿಸಿವೆ.