ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ ಖಂಡಿಸಿ ಗರ್ಲ್ಸ್ ಇಸ್ಲಾಮಿಕ್ ಅರ್ಗನೈಜೇಷನ್ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರ ಮತ್ತು ತಾಲೂಕು ಸಮಿತಿ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಶಿರಸ್ತೇದಾರ್ ಪ್ರಕಾಶ್ ನಾಯಕ್‌ಗೆ ಸಲ್ಲಿಸಿದರು.
ಸಮಿತಿ ತಾಲೂಕು ಅಧ್ಯಕ್ಷೆ ಹುಮೆರಾ ಸಿದ್ಧಿಕಾ ಮಾತನಾಡಿ, ತಿದ್ದುಪಡಿ ಕಾಯ್ದೆಯು ವಕ್ಫ್ ಸಂಘಗಳ ಸಮರ್ಥನೆ ಮತ್ತು ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ನಿಯಮಗಳನ್ನೊಳಗೊಂಡಿದ್ದು, ಸಮುದಾಯದ ಜನರಲ್ಲಿ ಕಳವಳವನ್ನುಂಟು ಮಾಡಿದೆ. ಧಾರ್ಮಿಕ ಉದ್ದೇಶಗಳಿಗೆ ಬಳಸಲಾಗುತ್ತಿದ್ದ ಐತಿಹಾಸಿಕ ದತ್ತಿ ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವುದು ಕಾಯ್ದೆಯ ಹಿಂದಿನ ಉದ್ದೇಶ. ಕರಾಳ ಕಾನೂನು ಸ್ವೀಕಾರಾರ್ಹವಲ್ಲ. ವಕ್ಫ್ ಕಲ್ಯಾಣ ವ್ಯವಸ್ಥೆ ಹಾಳು ಮಾಡಲು ಕೇಂದ್ರ ಸರ್ಕಾರ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ ಎಂದರು.
ಜಮಾತೆ ಇಸ್ಲಾಮಿ ಪದಾಧಿಕಾರಿಗಳಾದ ಸಾಲಿಹ ಬೇಗಂ, ಅಬ್ದುಲ್ ಖುದ್ದೂಸ್, ಮೊಹ್ಮದ್ ರಫೀಕ್, ಜವ್ವಾದ್ ಸಿದ್ಧಿಕಿ, ಅಸ್ೀಅಲಿ, ಶಾಹೀದ್ ಅಫ್ರಿದಿ ಸೇರಿ ಜಿಐಒ ಕಾರ್ಯಕರ್ತರಿದ್ದರು.