ವಿಜಯನಗರ ಜಿಲ್ಲೆ ಹೂವಿನಹಡಗಲಿಯ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಅವರ ಗಂಗಾವತಿಯಲ್ಲಿನ ಐಷರಾಮಿ ಕಟ್ಟಡ.  
ಜಿಲ್ಲೆ

ಹಡಗಲಿ ಆರ್‌ಎ್ಒ ಮನೆ ಮೆಲೆ ಲೋಕಾಯುಕ್ತ ದಾಳಿ

ಗಂಗಾವತಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಅವರ ನಗರದ ನಿವಾಸ ಮತ್ತು ತಾಲೂಕಿನ ಲಿಂಗದಹಳ್ಳಿ ಬಳಿಯ ಾರ್ಮ್‌ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಿತು.

ಹಲವು ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಣುಕಮ್ಮ, ಪ್ರಸ್ತುತ ಹೂವಿನಹಡಗಲಿ ಆರ್‌ಎ್ಓ ಆಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಡಗಲಿ, ಗಂಗಾವತಿ ವಿನಾಯಕ ನಗರದ ಮನೆ ಮತ್ತು ತಾಲೂಕಿನ ಲಿಂಗದಹಳ್ಳಿಯಲ್ಲಿ ಾರ್ಮ್‌ಹೌಸ್‌ಗೆ ಲೋಕಾಯುಕ್ತ ರಾಯಚೂರು ಡಿವೈಎಸ್ಪಿ ಶಶಿಧರ ನೇತೃತ್ವದ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಕಾಲಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತ್ತು.

ರ್ಮ್‌ಹೌಸ್‌ನಲ್ಲಿರುವ ತೋಟಗಾರಿಕೆ ಬೆಳೆ, ಜಾನುವಾರು, ಶೆಡ್ ಸೇರಿ ಪ್ರತಿಯೊಂದರ ಮಾಹಿತಿ ಪಡೆದ ತಂಡ, ಕೂಲಿಕಾರರನ್ನು ವಿಚಾರಿಸಿತು. ನಗರದಲ್ಲಿರುವ ಮನೆಯನ್ನು ಕೆಲ ಸಂಸ್ಥೆಗಳಿಗೆ ಬಾಡಿಗೆ ನೀಡಿದ್ದು, ಐಷರಾಮಿ ಕಟ್ಟವಾಗಿದೆ. ಮಾಹಿತಿ ನೀಡಲು ನಿರಾಕರಿಸಿದ ಅಧಿಕಾರಿಗಳ ತಂಡ, ಪೂರ್ಣ ವಿಚಾರಣೆ ಬಳಿಕ ಜಿಲ್ಲಾ ಕೇಂದ್ರದಲ್ಲಿ ವಿಷಯ ಬಹಿರಂಗಪಡಿಸುವುದಾಗಿ ಹೇಳಿತು. ಲೋಕಾಯುಕ್ತ ಪಿಐ ಚಂದ್ರಪ್ಪ ಮತ್ತಿತರರಿದ್ದರು.

ವಿಜಯನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೂ, ಗಂಗಾವತಿ ತಾಲೂಕಿನಲ್ಲಿ ಆಸ್ತಿ ಹೊಂದಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಕೂಲಿಕಾರರು ಹೊರತುಪಡಿಸಿದರೆ, ರೇಣುಕಮ್ಮ ಕುಟುಂಬಸ್ಥರು ಯಾರೂ ಇರಲಿಲ್ಲ.