ನಿರ್ಮಲ ತುಂಗಭದ್ರಾ ಅಭಿಯಾನದ ಸಮಾರೋಪಕ್ಕೆ ಸಂಸದ ರಾಜಶೇಖರ ಹಿಟ್ನಾಳರನ್ನು ಗಂಗಾವತಿಯಲ್ಲಿ ಅಭಿಯಾನದ ಪದಾಧಿಕಾರಿಗಳು ಗುರುವಾರ ಆಹ್ವಾನಿಸಿದರು. ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್ ವೀರಾಪುರ, ಪದಾಧಿಕಾರಿಗಳಾದ ಮಂಜುನಾಥ ಕಟ್ಟಿಮನಿ, ಡಾ.ಶಿವಕುಮಾರ ಮಾಲಿ ಪಾಟೀಲ್, ಮಂಜುನಾಥ ಗುಡ್ಲಾನೂರ್ ಇತರರಿದ್ದರು.  
ಜಿಲ್ಲೆ

ಅಭಿಯಾನ ಸಮಾರೋಪಕ್ಕೆ ಸಂಸದಗೆ ಆಹ್ವಾನ

ಗಂಗಾವತಿ: ತುಂಗಭದ್ರಾ ನದಿ ಸ್ವಚ್ಛತೆಗಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದಿಂದ ಹಮ್ಮಿಕೊಂಡಿರುವ ‘ನಿರ್ಮಲ ತುಂಗಭದ್ರಾ’ ಅಭಿಯಾನ ಸಮಾರೋಪಕ್ಕೆ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಗುರುವಾರ ಅಹ್ವಾನಿಸಲಾಯಿತು.

ನಗರದ ಕೆಲೋಜಿ ನಿವಾಸದಲ್ಲಿ ಸಂಸದರನ್ನು ಭೇಟಿಯಾದ ಆಂದೋಲನದ ಸ್ಥಳೀಯ ಪದಾಧಿಕಾರಿಗಳು, ಹರಿಹರದಿಂದ ಆರಂಭವಾಗಿರುವ ಅಭಿಯಾನ ಗಂಗಾವತಿಯಲ್ಲಿ ಜ.8ರಂದು ಸಮಾರೋಪಗೊಳ್ಳಲಿದ್ದು, ಆಗಮಿಸುವಂತೆ ಆಹ್ವಾನ ನೀಡಿದರು.

ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್ ವೀರಾಪುರ ಮಾತನಾಡಿ, ನದಿ ಸ್ವಚ್ಛತೆಗಾಗಿ ಅಭಿಯಾನ ಹಮ್ಮಿಕೊಂಡಿದ್ದು, ಸಂಘಟನೆಗಳು ಮತ್ತು ಇಲಾಖೆ ಎಲ್ಲ ಅಧಿಕಾರಿಗಳು ಸ್ಪಂದಿಸಿದ್ದಾರೆ. ಗಂಗಾವತಿಯಲ್ಲಿ ಹಮ್ಮಿಕೊಂಡ ಅಭಿಯಾನಕ್ಕೆ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ರಾಜಶೇಖರ ಹಿಟ್ನಾಳ, ತ್ರಿವಳಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯ ಸ್ವಚ್ಛಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳರನ್ನು ಭೇಟಿಯಾದ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ, ಗಂಗಾವತಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸ ಜಿಲ್ಲೆಯ ಸ್ಥಾಪನೆಗೆ ಆದ್ಯತೆ ನೀಡಬೇಕಿದ್ದು, ೋಷಣೆಯಾಗುವವರೆಗೂ ವಾರದಲ್ಲಿ ಮೂರು ದಿನ ಗಂಗಾವತಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿತು.

ಆಂದೋಲನದ ಪದಾಧಿಕಾರಿಗಳಾದ ಸಂತೋಷ ಕೆಲೋಜಿ, ಮಂಜುನಾಥ ಕಟ್ಟಿಮನಿ, ಡಾ.ಶಿವಕುಮಾರ ಮಾಲಿ ಪಾಟೀಲ್, ಮಂಜುನಾಥ ಗುಡ್ಲಾನೂರ್, ರಾಘವೇಂದ್ರ ತೂನಾ, ಎ.ಕೆ.ಮಹೇಶಕುಮಾರ, ಜಿ.ಆರ್.ಅರ್ಜುನ್, ಎಂ.ಜೆ.ಶ್ರೀನಿವಾಸ, ಎಚ್.ಸಂಗಮೇಶ ಇತರರಿದ್ದರು.

ಕಾರ್ಯಕ್ರಮ ಮುಂದೂಡಿಕೆ: ಡಿ.30ರಂದು ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ಸಮಾರೋಪ ಮತ್ತು ಜಾಗೃತಿ ಪಾದಯಾತ್ರೆಯನ್ನು ಜ.7 ಮತ್ತು 8ಕ್ಕೆ ಮುಂದೂಡಲಾಗಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ತಾಲೂಕಿನ ಚಿಕ್ಕಜಂತಕಲ್ ತುಂಗಭದ್ರಾ ನದಿ ತೀರದಲ್ಲಿ ಜ.7ರಂದು ತುಂಗಾರತಿ ಮತ್ತು ಜ.8ರಂದು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಅಭಿಯಾನದ ಸಮಾರೋಪ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಸಮಿತಿ ಸದಸ್ಯ ಸಂತೋಷ ಕೆಲೋಜಿ ತಿಳಿಸಿದ್ದಾರೆ.