ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಚೇತರಿಕೆ ಉಪಕ್ರಮದ ತರಬೇತಿ ಕಾರ್ಯಾಗಾರದಲ್ಲಿ ಕಲಿಕಾ ಚೇತರಿಕೆ ಮಾಹಿತಿ ಪುಸ್ತಕವನ್ನು ಶಾಸಕ ಪರಣ್ಣ ಮುನವಳ್ಳಿ ಶನಿವಾರ ಬಿಡುಗಡೆಗೊಳಿಸಿದರು. 
ಜಿಲ್ಲೆ

ಶಿಕ್ಷಕರು ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಂತೆ ಶಾಸಕ ಪರಣ್ಣಮುನವಳ್ಳಿ ಹೇಳಿದರು.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಶನಿವಾರ ಆಯೋಜಿಸಿದ್ದ ಕಲಿಕಾ ಚೇತರಿಕೆ ಉಪಕ್ರಮದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಕ್ಕಳ ಬೌದ್ಧಿಕ ಮಟ್ಟ ಅನುಗುಣ ಬೋಧನೆ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಬೇಕಿದ್ದು, ಕಲಿಕೆಗೆ ಪ್ರೇರಣೆಯಾಗಬೇಕು. ಕ್ರಿಯಾಶೀಲ ಚಟುವಟಿಕೆಗಳು ಕಲಿಕಾಸಕ್ತಿ ಹೆಚ್ಚಿಸುವ ಜತೆಗೆ ಪ್ರಯೋಗಾತ್ಮ ಬೋಧನೆಗೆ ಆದ್ಯತೆ ನೀಡಬೇಕು ಎಂದರು.

ಬಿಇಒ ಸೋಮಶೇಖರಗೌಡ ತಿಪ್ಪನಾಳ ಮಾತನಾಡಿ, ತರಬೇತಿ ಕಾರ್ಯಾಗಾರದ ಮೂಲಕ ಶಿಕ್ಷಕರಿಗೆ ಬೋಧನೆ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ ಎಂದರು. ಇಲಾಖೆಯಿಂದ ರೂಪಿಸಿರುವ ಕಲಿಕಾ ಚೇತರಿಕೆ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಸಮನ್ವ ಶಿಕ್ಷಣಾಧಿಕಾರಿ ವಿ.ವಿ.ಗೊಂಡಬಾಳ, ಸಂಪನ್ಮೂಲ ವ್ಯಕ್ತಿಗಳಾದ ಅಜ್ಜಯ್ಯ, ಸತೀಶ, ಜಯಮ್ಮ, ಶಾರದಾ, ಅಜೀಂ ಪ್ರೇಮಜೀ ೌಂಡೇಶನ್ ಪ್ರತಿನಿಧಿ ಶೋಭಾ ಇತರರಿದ್ದರು.