ಗಂಗಾವತಿ ಸರ್ಕಾರಿ ಉರ್ದು ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಬಿಡಿಸಿದ ಗಣಿತ ರಂಗೋಲಿ ಗಮನಸೆಳೆಯಿತು.  
ಜಿಲ್ಲೆ

ಸೂತ್ರ ನೆನಪಿಟ್ಟುಕೊಂಡರೆ ಗಣಿತ ಸರಳ

Koppal

ಗಂಗಾವತಿ: ಗಣಿತ ವಿಷಯ ಸುಲಭವಾಗಿ ಕಲಿಯಬಹುದಾಗಿದ್ದು, ಏಕಾಗ್ರತೆಯಿಂದ ಅಭ್ಯಸಿಸುವುದನ್ನು ರೂಢಿಸಿಕೊಳ್ಳುವಂತೆ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ ಟ್ರಸ್ಟ್ ಜಿಲ್ಲಾಧ್ಯಕ್ಷ, ಸಂಪನ್ಮೂಲ ಶಿಕ್ಷಕ ಸಿದ್ಧಲಿಂಗೇಶ ಪೂಲಭಾವಿ ಸಲಹೆ ನೀಡಿದರು.

ನಗರದ ಸರ್ಕಾರಿ ಉರ್ದು ಮಾಧ್ಯಮ ಪ್ರೌಢಶಾಲೆಯಲ್ಲಿ ವಿಜ್ಞಾನಿ ದಿ.ಶ್ರೀನಿವಾಸ ರಾಮಾನುಜಂ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಗಣಿತ ದಿನ ನಿಮಿತ್ತ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ವಿಷಯದ ಪರೀಕ್ಷಾ ಸಿದ್ಧತೆ ಕಾರ್ಯಾಗಾರದಲ್ಲಿ ಮಾತನಾಡಿದರು. ಗಣಿತ ಕಬ್ಬಿಣದ ಕಡಲೆಯಲ್ಲ. ಆಸಕ್ತಿಯಿಂದ ಮನನ ಮಾಡಿಕೊಂಡರೆ ಎಲ್ಲವನ್ನೂ ಸಿದ್ಧಿಸಿಕೊಳ್ಳಲು ಸಾಧ್ಯವಿದೆ. ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕ್ರಿಯಾಶೀಲ ಚಟುವಟಿಕೆಗಳ ಮೂಲಕ ವಿಷಯಗಳಿಗೆ ಹತ್ತಿರವಾಗುವಂತೆ ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಮಕ್ಕಳು ತಯಾರಿಸಿದ ಗಣಿತ ಮಾದರಿ, ಚಿತ್ತಾಕರ್ಷಕ ರಂಗೋಲಿ ಮತ್ತು ರೂಪಕಗಳ ಸ್ಪರ್ಧೆ ಗಮನಸೆಳೆಯಿತು. ಪ್ರಾಚಾರ್ಯ ಎಂ.ಬಿ.ಕೊಪ್ಪಳ ಮಾಹಿತಿ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹ್ಮದ್‌ಸಾಬ್ ದಳಪತಿ, ಸದಸ್ಯ ಅಟಲ್‌ಸಾಬ್ ಇತರರಿದ್ದರು.