ಗಂಗಾವತಿಯಲ್ಲಿ ಎಸ್‌ಎ್ಐನಿಂದ ಕೆಕೆಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಜಶೇಖರ್‌ಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ, ಪದಾಧಿಕಾರಿಗಳಾದ ಹನುಮೇಶ, ಬಾಲಾಜಿ ಚಳ್ಳಾರಿ, ರಮೇಶ, ನೇತ್ರಾ, ಮಂಜುಳಾ ಇತರರಿದ್ದರು.  
ಜಿಲ್ಲೆ

ಬಸ್ ಸಂಚಾರದ ಕೊರತೆ ನೀಗಿಸಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ತಾಲೂಕಿನ ಸುಳೇಕಲ್ ಸಂಪರ್ಕದ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಒತ್ತಾಯಿಸಿ ಎಸ್‌ಎ್ಐನಿಂದ ನಗರದ ಕೆಕೆಆರ್‌ಟಿಸಿ ಡಿಪೋ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕ ರಾಜಶೇಖರ್‌ಗೆ ಸಲ್ಲಿಸಲಾಯಿತು.

ಜಿಲ್ಲಾ ಸಮಿತಿ ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ಕನಕಗಿರಿಯಿಂದ ಸುಳೇಕಲ್ ಮಾರ್ಗವಾಗಿ ಗಂಗಾವತಿಗೆ ಬಸ್ ಸಂಚಾರದ ಕೊರತೆಯಿದೆ. ಇದರಿಂದ ಸುಳೇಕಲ್ ಸಂಪರ್ಕದ ಗ್ರಾಮಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಕಾಲಕ್ಕೆ ಬಸ್ ವ್ಯವಸ್ಥೆಯಿಲ್ಲದಿದ್ದರಿಂದ ಶಿಕ್ಷಣ ಮೊಟಕುಗೊಳಿಸುವ ಸ್ಥಿತಿ ಬಂದಿದೆ.

ಕನಕಗಿರಿ, ಸುಳೇಕಲ್, ಕೇಸರಹಟ್ಟಿ ಸಂಪರ್ಕದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ. ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದಾಗ ಎರಡು ದಿನ ಗಡವು ಕೇಳಿದ್ದರು. ವಾರವಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವ್ಯವಸ್ಥೆ ಕೈಗೊಳ್ಳುವರೆಗೂ ಹೋರಾಟ ನಿಲ್ಲಲ್ಲ ಎಂದರು. ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ್, ಪದಾಧಿಕಾರಿಗಳಾದ ಹನುಮೇಶ, ಬಾಲಾಜಿ ಚಳ್ಳಾರಿ, ಮಾರುತಿ, ರಮೇಶ, ನೇತ್ರಾ, ಮಂಜುಳಾ ಇತರರಿದ್ದರು.