ಗಂಗಾವತಿ ಶ್ರೀಕೊಟ್ಟೂರೇಶ್ವರ ಪಿಯು ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಮತ್ತು ಸಂಚಾರಿ ಠಾಣೆಯಿಂದ ಹಮ್ಮಿಕೊಂಡಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಮಾಹಿತಿ ಪತ್ರವನ್ನು ವಿದ್ಯಾರ್ಥಿಗಳಿಗೆ ಶನಿವಾರ ವಿತರಿಸಲಾಯಿತು. ಸಂಚಾರಿ ಠಾಣೆ ಪಿಎಸ್‌ಐ ಇಸ್ಮಾಯಿಲ್‌ಸಾಬ್, ಪ್ರಾಚಾರ್ಯ ಡಾ.ವಿ.ಜಿ.ಯಾವಗಲ್ ಇದ್ದರು. 
ಜಿಲ್ಲೆ

ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಿ

ಗಂಗಾವತಿ: ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕಿದ್ದು, ಜೀವನದ ಸುರಕ್ಷತೆಯತ್ತ ಗಮನಹರಿಸುವಂತೆ ನಗರದ ಸಂಚಾರಿ ಠಾಣೆ ಪಿಎಸ್‌ಐ ಇಸ್ಮಾಯಿಲ್‌ಸಾಬ್ ಹೇಳಿದರು.

ನಗರದ ಶ್ರೀ ಕೊಟ್ಟೂರೇಶ್ವರ ಪಿಯು ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಮತ್ತು ಸಂಚಾರಿ ಠಾಣೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಸಂಚಾರ ನಿಯಮ ಪಾಲಿಸುವ ಮೂಲಕ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕಿದ್ದು, ಸಂಭವನೀಯ ಅಪಘಾತವನ್ನು ನಿಯಂತ್ರಿಸಬೇಕಿದೆ. ಜೀವ ಅಮೂಲ್ಯವಾಗಿದ್ದು, ಕಾನೂನು ಸುವ್ಯವಸ್ಥೆಗಾಗಿ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ರಸ್ತೆ ಸುರಕ್ಷತೆಯ ಮಾಹಿತಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಂಚಾರ ಮತ್ತು ರಸ್ತೆ ಸುರಕ್ಷತಾ ಅಭಿಯಾನದ ಔಚಿತ್ಯದ ಬಗ್ಗೆ ಪ್ರಾಚಾರ್ಯ ಡಾ.ವಿ.ಜಿ.ಯಾವಗಲ್ ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಚಂದ್ರಶೇಖರ ಹಂಚಿನಾಳ ಸೇರಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು.