ಶ್ರೀರಾಮನಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಪ್ರಾಚಾರ್ಯ ತಿಮ್ಮಣ್ಣನಾಯಕ ಉದ್ಘಾಟಿಸಿದರು. ರಾಜ್ಯ ನೃತ್ಯ ಮತ್ತು ಸಂಗೀತ ಅಕಾಡೆಮಿ ಸದಸ್ಯ ರಮೇಶ ಗಬ್ಬೂರ್, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಮಡಿವಾಳ್, ದಸಾಪ ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ ಇತರರಿದ್ದರು.  
ಜಿಲ್ಲೆ

ಸಾವಿತ್ರಿಬಾಯಿ ಫುಲೆ ಸಾಮಾಜಿಕ ಕಳಕಳಿ ಸ್ಮರಿಸಿ

ಗಂಗಾವತಿ: ಶಿಕ್ಷಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ ಎಂದು ರಾಜ್ಯ ನೃತ್ಯ ಮತ್ತು ಸಂಗೀತ ಅಕಾಡೆಮಿ ಸದಸ್ಯ ರಮೇಶ ಗಬ್ಬೂರ್ ಹೇಳಿದರು.

ತಾಲೂಕಿನ ಶ್ರೀರಾಮನಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧವಿದ್ದ ಸಂದರ್ಭದಲ್ಲಿ 18 ಶಾಲೆಗಳನ್ನು ತೆರೆಯುವುದರ ಮೂಲಕ ಹೆಣ್ಣಿನ ಶೋಷಣೆ ವಿರುದ್ಧ ಧ್ವನಿ ಎತ್ತಿದರು. ಶಿಕ್ಷಣದ ಮೂಲಕ ಮಹಿಳೆಯರಿಗೆ ಸಮಾನತೆ ನೀಡಿದ ಇವರ ಸಾಮಾಜಿಕ ಕಳಕಳಿ ನಿತ್ಯ ಸ್ಮರಿಸಬೇಕಿದೆ ಎಂದರು.

ಪರಿಷತ್ ತಾಲೂಕು ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ವಿಶೇಷ ಉಪನ್ಯಾಸ, ಮನೆ ಮನೆಗೆ ಅಂಬೇಡ್ಕರ್ ಅರಿವಿನ ಕಾರ್ಯಕ್ರಮ ಸೇರಿ ಸಾಹಿತ್ಯಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಾವಿತ್ರಿಬಾಯಿ ಫುಲೆ ಮತ್ತು ಅಂಬೇಡ್ಕರ್ ಅವರ ಅರಿವಿನ ಹಾಡುಗಳಿಗೆ ಚಿದಾನಂದ ಬರಗೂರ ಮತ್ತು ಚೈತ್ರಾ ಗಬ್ಬೂರ ಧ್ವನಿಗೂಡಿಸಿದರು.

ವಸತಿ ಶಾಲೆ ಪ್ರಾಚಾರ್ಯೆ ತಿಮ್ಮಣ್ಣನಾಯಕ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಮಡಿವಾಳ್, ದಸಾಪ ತಾಲೂಕಾಧ್ಯಕ್ಷ ಛತ್ರಪ್ಪ ತಂಬೂರಿ, ಪ್ರಮುಖರಾದ ಪ್ರಕಾಶ್ ರಾಠೋಡ್, ಸುಂಕಪ್ಪ, ರಾಮಪ್ಪ ಭೋವಿ, ಸಿರಾಜ್ ಸಿದ್ದಾಪುರ, ಶ್ರೀನಿವಾಸ ಉಪ್ಪಾರ, ಬಸವರಾಜ ಭೋವಿ ಇತರರಿದ್ದರು.