ಗಂಗಾವತಿ: ನಗರದ ಎಚ್‌ಆರ್‌ಎಸ್ ಕಾಲನಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಬಾಲ್ಯ ವಿವಾಹ ನಿಯಂತ್ರಣ ಕುರಿತು ಜಾಗೃತಿ ಅಭಿಯಾನದ ಬೀದಿ ನಾಟಕ ಪ್ರದರ್ಶನ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ನಗರ ವಲಯದ ಶ್ರೀ ಗೌರಿ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡಿದ್ದು, ಬಾಲ್ಯ ವಿವಾಹ ನಿಯಂತ್ರಣ, ನೀರಿನ ಮಿತಬಳಕೆ, ಬಯಲು ಶೌಚ ನಿಷೇಧ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸುಧಾ ಮಾತನಾಡಿ, ಬಾಲ್ಯ ವಿವಾಹಕ್ಕೆ ಪ್ರೇರಣೆ ಶಿಕ್ಷಾರ್ಹ ಅಪರಾಧವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನಿಯಂತ್ರಿಸಬೇಕಿದೆ. ಪ್ರಮುಖ ವಾರ್ಡ್‌ಗಳಲ್ಲಿ ಬೀದಿ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ವಾರ್ಡ್ ಹಿರಿಯ ಧುರೀಣೆ ಲಕ್ಷ್ಮಮ್ಮ, ಮೇಲ್ವಿಚಾರಕ ಬಿ.ನೀಲರಾಜ್ ಸೇರಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸೇವಾ ಪ್ರತಿನಿಧಿಗಳು ಮತ್ತು ಕಲಾತಂಡದ ಸದಸ್ಯರಿದ್ದರು.