ಗಂಗಾವತಿ ರಾಯರ ಓಣಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಸಂಸದ ಕೆ.ರಾಜಶೇಖರ್ ಹಿಟ್ನಾಳ್‌ರನ್ನು ಶ್ರೀಮಠದಿಂದ ಮಂಗಳವಾರ ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ವಾಸುದೇವ ನವಲಿ, ಮಠದ ವಿಚಾರಣಕರ್ತ ರಾಮಕೃಷ್ಣ ಜಹಗೀರದಾರ್, ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್, ಚಿತ್ರನಟ ವಿಷ್ಣುತೀರ್ಥ ಜೋಶಿ ಆದಾಪುರ ಇತರರಿದ್ದರು.  
ಜಿಲ್ಲೆ

ಮುಖ್ಯಮಂತ್ರಿ ಬದಲಾವಣೆ ಇಲ್ಲ

ಗಂಗಾವತಿ: ನಗರದ ರಾಯರ ಓಣಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಮಂಗಳವಾರ ಭೇಟಿ ನೀಡಿ ದರ್ಶನ ಪಡೆದುಕೊಂಡರು. ವಿಪ್ರ ಸಮಾಜದ ಮನವಿ ಹಿನ್ನೆಲೆಯಲ್ಲಿ ಮಠಕ್ಕೆ ಬಂದಿದ್ದು, ಮೃತ್ತಿಕಾವೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಠದ ಅಭಿವೃದ್ಧಿ ಕಾಮಗಾರಿಗಳಿಗೆ 5ಲಕ್ಷ ರೂ. ಅನುದಾನ ನೀಡುವಂತೆ ಮಠದ ಭಕ್ತರು ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯನವರೇ ಅಧಿಕಾರದಲ್ಲಿ ಮುಂದುವರಿಯಲಿದ್ದು, ಯಾವುದೇ ಬದಲಾವಣೆಯಿಲ್ಲ. ಹೈಕಮಾಂಡ್ ರಾಜ್ಯಕ್ಕೆ ಬಂದಿದ್ದಾರೆ ಅಂದರೆ ಬದಲಾವಣೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಜನಪರ ಆಡಳಿತ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭದ್ರವಾಗಿದ್ದು, ಸ್ಥಾನಪಲ್ಲಟ ಕುರಿತು ಅನಗತ್ಯ ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ರಾಯರ ಮಠದಿಂದ ಸಂಸದ ಕೆ.ರಾಜಶೇಖರ್‌ಹಿಟ್ನಾಳ್‌ರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ವಾಸುದೇವ ನವಲಿ, ಮುಜರಾಯಿ ಇಲಾಖೆ ಸದಸ್ಯ ವಿಶ್ವನಾಥ ಮಾ.ಪಾಟೀಲ್, ಮಠದ ವಿಚಾರಣಕರ್ತ ರಾಮಕೃಷ್ಣ ಜಹಾಗೀರದಾರ್, ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್, ಚಿತ್ರನಟ ವಿಷ್ಣುತೀರ್ಥ ಜೋಶಿ ಆದಾಪುರ, ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷೆ ರೂಪಾರಾಣಿ ರಾಯಚೂರು, ಮುಖಂಡರಾದ ಸಂತೋಷ ಕೆಲೋಜಿ, ಉದಯ ಜಹಗೀರದಾರ್, ಗುರುರಾಜ್ ಲಾಯದುಣಸಿ, ಹನುಮಂತರಾವ್ ಇತರರಿದ್ದರು.