ಗಂಗಾವತಿ: ಶ್ರೀಲಂಕಾದಲ್ಲಿ ನವೀಕೃತಗೊಂಡ ಶ್ರೀ ಸೀತಾಮಾತೆ ದೇವಾಲಯಕ್ಕೆ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಿಂದ ತುಂಗಭದ್ರಾ ಜಲ ಮತ್ತು ಮೃತ್ತಿಕಾವನ್ನು ಭಾನುವಾರ ಕಳುಹಿಸಿಕೊಡಲಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ನಂತರ ಶ್ರೀಲಂಕಾದಲ್ಲೂ ಶ್ರೀ ಸೀತಾಮಾತೆ ದೇವಾಲಯ ನವೀಕರಣಗೊಂಡಿದೆ. ಆರ್ಟ್ ಆ್ ಲಿವಿಂಗ್‌ನ ಮುಖ್ಯಸ್ಥ ರವಿಶಂಕರ ಗುರೂಜಿ ನೇತೃತ್ವದಲ್ಲಿ ಮೇ 19ರಂದುಶ್ರೀಲಂಕಾದಲ್ಲಿ ವಿಶೇಷ ಪೂಜೆ ಸಂಕಲ್ಪ ಕೈಗೊಳ್ಳಲಾಗಿದೆ. ಅಯೋಧ್ಯೆ ಮತ್ತು ನೇಪಾಳದಿಂದಲೂ ಜಲ ಮತ್ತು ಮೃತ್ತಿಕಾ ಕೊಂಡಯ್ಯಲಾಗುತ್ತಿದೆ. ಅದರಂತೆ ಅಂಜನಾದ್ರಿ ಬೆಟ್ಟದಿಂದಲೂ ಜಲ, ಮೃತ್ತಿಕಾ ಮತ್ತು ವಸಗಳನ್ನು ಆರ್ಟ್ ಆ್ ಲಿವಿಂಗ್ ಟ್ರಸ್ಟಿ ಸಂತೋಷ ಶ್ರೀನಿವಾಸಲು ನೇತೃತ್ವದ ತಂಡದೊಂದಿಗೆ ಕಳುಹಿಸಿಕೊಡಲಾಯಿತು. ಇದಕ್ಕೂ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹನುಮಾನ ಚಾಲಿಸ್ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.
ಆರ್ಟ್ ಆ್ ಲಿವಿಂಗ್ ಸ್ಥಳೀಯ ಪ್ರತಿನಿಧಿ ಸಂತೋಷ ಕೆಲೋಜಿ ಮಾತನಾಡಿ, ಶ್ರೀಲಂಕಾದಲ್ಲಿ ಹಮ್ಮಿಕೊಂಡ ವಿಶೇಷ ಸಂಕಲ್ಪ ಅಭಿಯಾನದಲ್ಲಿ ಅಂಜನಾದ್ರಿಯೂ ಪ್ರತಿನಿಧಿಸಲಿದ್ದು, ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು. ಮುಖಂಡರಾದ ದೇವೇಂದ್ರಪ್ಪ, ರಮಾ ಸಂತೋಷ ಇದ್ದರು.