ಗಂಗಾವತಿ: ನಗರದ ಐತಿಹಾಸಿಕ ಶ್ರೀ ಕೊಟ್ಟೂರು ಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಮಹಾ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ದೇವಾಲಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, 2024ರಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯವನ್ನು ಲೋಕಾರ್ಪಣೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ನಿಮಿತ್ತ ೆ.22ರಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಹೂವಿನ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ಶ್ರೀಸ್ವಾಮಿ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪಟ ಏರಿಸುವುದು, ಮಡಿತೇರು, ಭೂಮಿ ಗಣಾರಾಧನೆ ನಂತರ ಪ್ರಸಾದ ವಿತರಣೆ ಜರುಗಿತು. ಸಂಜೆ ಸರ್ವಾಲಂಕೃತ ರಥೋತ್ಸ ಮಳೇಮಲ್ಲೇಶ್ವರ ವೃತ್ತದ ಬಳಿಯ ಪಾದಗಟ್ಟೆವರೆಗೆ ಅದ್ದೂರಿಯಾಗಿ ನೆರವೇರಿತು. ಭಕ್ತರು ಉತ್ತುತ್ತಿ ಸಮರ್ಪಿಸುವ ಮೂಲಕ ಹರಕೆ ಸಲ್ಲಿಸಿದರು.
ದೇವಾಲಯ ಸಮಿತಿ ಪದಾಧಿಕಾರಿಗಳಾದ ಗುಂಜಳ್ಳಿ ರಾಜಶೇಖರಪ್ಪ, ಅಕ್ಕಿ ಕೊಟ್ರಪ್ಪ, ಬಾವಿಕಟ್ಟಿ ಬಸವರಾಜ, ಹೊಸಳ್ಳಿ ಶಂಕರಗೌಡ, ಶೇಖರಪ್ಪ ಅರಳಿ, ಜಗದೀಶ, ಕಲ್ಮೇಶ ಪಟ್ಟಣಶೆಟ್ಟಿ, ಸಿದ್ದಾಪುರ ರಾಚಪ್ಪ, ಎ.ಕೆ.ಮಹೇಶಕುಮಾರ ಬೆನಕನಾಳ ಬಸವರಾಜ, ಪರಗಿ ಪ್ರಹ್ಲಾದ, ಆನಂದ, ಶಿವಪ್ರಕಾಶ ಅಕ್ಕಿ, ಸಿದ್ದಲಿಂಗೇಶ ಪೂಲಭಾವಿ ಇತರರಿದ್ದರು.