ಗಂಗಾವತಿ 4ನೇ ವಾರ್ಡ್ ಸಿದ್ದಿಕೇರಿಯಲ್ಲಿ ಕೈಗೆತ್ತಿಕೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಲೋಕೋಪಯೋಗಿ ಎಇಇ ವಿಶ್ವನಾಥ, ಮುಖಂಡರಾದ ಯಮನೂರ್ ಚೌಡ್ಕಿ, ಅರ್ಜುನ ನಾಯಕ ಇತರರಿದ್ದರು. 
ಜಿಲ್ಲೆ

ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ

ಶ್ರೀನಾಥ

ಗಂಗಾವತಿ: ನಗರದ 4ನೇ ವಾರ್ಡ್ ಸಿದ್ದಿಕೇರಿಯಲ್ಲಿ ಕೈಗೆತ್ತಿಕೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಎಸ್‌ಟಿಸಿ, ಟಿಎಸ್ಪಿ ಯೋಜನೆಯಡಿ ಸಿದ್ದಿಕೇರಿ ರಸ್ತೆ ಅಭಿವೃದ್ಧಿಗೆ ಎರಡು ತಿಂಗಳ ಹಿಂದೆ ಚಾಲನೆ ನೀಡಿದ್ದು, ಜಾಗದ ವಿವಾದ ಶುರುವಾಗಿದ್ದರಿಂದ ನನೆಗುದಿಗೆ ಬಿದ್ದಿತ್ತು.

ಅರೆಬರೆ ಕಾಮಗಾರಿ ನಿರ್ವಹಿಸಿದ್ದರೂ, ಜಾಗದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಗುತ್ತಿಗೆದಾರರು ಕಾಮಗಾರಿ ಕೈಬಿಟ್ಟಿದ್ದರು.

ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ಶಾಸಕ ಗಾಲಿ ಜನಾರ್ದನರೆಡ್ಡಿ ಮಾಹಿತಿ ಪಡೆದುಕೊಂಡರು. ಕಾನೂನು ಪ್ರಕಾರ ಬಗೆಹರಿಸಿ, ಶೀಘ್ರವೇ ಕಾಮಗಾರಿ ನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದರು.

ಲೋಕೋಪಯೋಗಿ ಎಇಇ ವಿಶ್ವನಾಥ, ಮುಖಂಡರಾದ ಷಣ್ಮುಖನಾಯಕ, ದುರುಗಪ್ಪ ದಳಪತಿ, ವಿಶ್ವನಾಥ ಮಾ.ಪಾಟೀಲ್, ಹೊಸ್ಮಲಿ ರಮೇಶ, ಕನಕರಾವ್, ಮಲ್ಲೇಶಪ್ಪ ನಾಯಕ ಹೊಸ್ಮಲಿ, ರಾಮುಲು ಬಡಿಗೇರ್, ಮಂಜುನಾಥ್ ಮಳ್ಳಿಕೇರಿ ಇತರರಿದ್ದರು.