ಗಂಗಾವತಿ: ಸೇವಾಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಸಂಘದ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ ಮಾತನಾಡಿ, ಹಲವು ವರ್ಷಗಳಿಂದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸುತ್ತಿದ್ದು, ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ. ತಾಯಿ, ಶಿಶು ಮರಣ ತಪ್ಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ ಪ್ರಮುಖವಾಗಿದ್ದು, ಕೇಂದ್ರ ಸರ್ಕಾರವೂ ಪ್ರಶಂಸಿದೆ. ಕಾರ್ಯಕರ್ತೆಯರಿಗೆ ಸೇವಾಭದ್ರತೆ ಒದಗಿಸುವುದು, ಗೌರವಧನ, ಪ್ರೋತ್ಸಾಹ ಭತ್ಯೆ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಲಾಲಬೀ, ಆಫ್ರೀನ್ ಬೇಗಂ, ಗೌಸಿಯಾ, ಸುಮಾ, ಮೀನಾಕ್ಷ್ಮೀ, ಸರೋಜಾಬಾಯಿ, ದೀಪಾ, ಜಯಶ್ರೀ, ಸಮೀರಾಬೇಗಂ, ಈರಮ್ಮ, ಲಕ್ಷ್ಮೀದೇವಿ, ಸರ್ವಮಂಗಳಾ, ಲಲಿತಾಹಿರೇಮಠ, ಜ್ಯೋತಿ, ಸಂಗೀತಾ, ಶರಣಮ್ಮ ಇತರರಿದ್ದರು.