ಗಂಗಾವತಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಹೊರಗುತ್ತಿಗೆ ಕಾರ್ಮಿಕರ ಸಂಘದ ತಾಲೂಕು ಘಟಕ ಸೋಮವಾರ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ನಂ.2 ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಇಇ ಹರ್ಷಾಗೆ ಮನವಿ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ದುರುಗಪ್ಪ ನಡುಲಮನಿ ಮಾತನಾಡಿ, ಕಳೆದ 25 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 96 ನೀರು ನಿರ್ವಹಣೆ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲವಾಗಿದೆ. ಕಡಿಮೆ ವೇತನದಲ್ಲಿ ದುಡಿಯಬೇಕಾಗಿದೆ. ಕಳೆದ 4 ತಿಂಗಳಿಂದ ವೇತನ ಸೇರಿ ಇಎಸ್‌ಐ, ಪಿಎ್ ಪಾವತಿಯಾಗಿಲ್ಲ. ಪ್ರತಿ ತಿಂಗಳು 10ನೇ ತಾರೀಖಿಗೆ ವೇತನ ಪಾವತಿಸುವಂತೆ ಟೆಂಡರ್ ಷರತ್ತಿನಲ್ಲಿದ್ದರೂ ಗುತ್ತಿಗೆದಾರರು ಪಾಲಿಸುತ್ತಿಲ್ಲ. ಟೆಂಡರ್ ನಿಯಮಾವಳಿಯಂತೆ ವೇತನ ಮತ್ತು ಇತರ ಸೌಲಭ್ಯ ಒದಗಿಸಬೇಕು. ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಶರಣಬಸವ, ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಶಿವಶಂಕರ, ಶೇಖ್‌ಬಹಾದ್ದೀನ್, ನಬೀಸಾಬ್, ನಾಗಮ್ಮ, ಲಕ್ಷ್ಮೀ, ವಿಜಯಲಕ್ಷ್ಮೀ, ಹುಲಿಗೆಮ್ಮ, ರೇಣುಕಮ್ಮ ಇತರರಿದ್ದರು.