ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ವಿತರಿಸುವಂತೆ ಒತ್ತಾಯಿಸಿ ಬಹುಸಮಾಜ ಪಕ್ಷ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮಂಗಳವಾರ ಮನವಿ ಸಲ್ಲಿಸಿದರು. ಸಮಿತಿ ಜಿಲ್ಲಾ ಸಂಯೋಜಕ ಹುಲಿಗೇಶ ದೇವರಮನಿ, ಲಾನುಭವಿಗಳಾದ ಹುಲಿಗೆಮ್ಮ, ನಾಗಮ್ಮ, ನೀಲಮ್ಮ ಇತರರಿದ್ದರು.  
ಜಿಲ್ಲೆ

ಮಾಸಾಶನ ಸ್ಥಗಿತಕ್ಕೆ ಆಕ್ರೋಶ

ಗಂಗಾವತಿ: ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ವಿತರಿಸುವಂತೆ ಒತ್ತಾಯಿಸಿ ಬಹುಸಮಾಜ ಪಕ್ಷ ಜಿಲ್ಲಾ ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾ ಸಂಯೋಜಕ ಹುಲಿಗೇಶ ದೇವರಮನಿ ಮಾತನಾಡಿ, ಸರ್ಕಾರದಿಂದ ವಯೋವೃದ್ಧರಿಗೆ ಸಂಧ್ಯಾ ಸುರಕ್ಷಾ ಇತರ ಯೋಜನೆಯಡಿ ನೀಡಲಾಗುವ ಮಾಶಾಸನ ಕಳೆದ ಮೂರ‌್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದು, ವೃದ್ಧ ಲಾನುಭವಿಗಳಿಗೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ.

ಹಲವು ವರ್ಷಗಳಿಂದ ವಿತರಿಸುತ್ತಿದ್ದ ಮಾಸಾಶನ ಏಕಾಏಕಿ ಸ್ಥಗಿತಗೊಳಿಸಿದ್ದು, ಖಂಡನೀಯ. ಇದರಿಂದ ಮಾಸಾಶನ ಅವಲಂಬಿತ ಲಾನುಭವಿಗಳು ಊಟೋಪಾಚಾರ ಮತ್ತು ಔಷಧ ಖರ್ಚಿಗೂ ಪರದಾಡುವಂತ ಸ್ಥಿತಿ ಬಂದಿದೆ. ಸ್ಥಗಿತದ ಬಗ್ಗೆ ತಹಸೀಲ್ದಾರ್ ಮತ್ತು ಖಜಾನೆ ಅಧಿಕಾರಿಗಳು ಸ್ಪಷ್ಟತೆ ನೀಡುತ್ತಿಲ್ಲ. ಸರ್ಕಾರ ಮಧ್ಯಪ್ರವೇಶಿಸಿ, ಕೂಡಲೇ ಮಾಸಾಶನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಹುಲಿಗೆಮ್ಮ, ನಾಗಮ್ಮ, ನೀಲಮ್ಮ, ಹುಸೇನಮ್ಮ, ಹನುಮಮ್ಮ, ಮೆಟ್ರಿ ದುರುಗಮ್ಮ, ಹುಲಿಗೆಮ್ಮ ಇತರರಿದ್ದರು.